ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಧ್ಯಾಪಕರು ಪಡುವ ಪಾಡುಗಳ ಕುರಿತು ಬರೆದವರ ಸಂಖ್ಯೆ ಬಹಳ ಕಡಿಮೆ. ಪ್ರಾಧ್ಯಾಪಕರ ಬೇಕು ಬೇಡಗಳ ಕುರಿತು, ಅವರ ಕಷ್ಟ ಭವಣೆಗಳ ಕುರಿತು ಅರಿತವರು ತುಂಬಾ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಪ್ರಾಧ್ಯಾಪಕರು ಪಡುವಂತಹ ಕಷ್ಟ ದುಮ್ಮಾನಗಳ ಕುರಿತು ಬರೆದಿರುವಂತಹ ಅಪರೂಪದ ಕಾದಂಬರಿ ಇದು ವಿದಾಯವಲ್ಲ. ಹಿಂದಿಯ ಕಾದಂಬರಿಕಾರರಾದಂತಹ ಡಾ. ಧರ್ಮೇಂದ್ರ ಗುಪ್ತ ಅವರ ‘ಇಸೆ ವಿದಾ ಮತ್ ಕಹೊ’ ಎನ್ನುವ ಹಿಂದಿ ಕಾದಂಬರಿಯ ಕನ್ನಡ ಅನುವಾದವನ್ನು ಪಾರ್ವತಿ ಅವರು ಮಾಡಿದ್ದಾರೆ. ಮೂಲ ಕೃತಿಯ ಆಶಯಕ್ಕೆ ದಕ್ಕೆ ಬರದ ರೀತಿಯಲ್ಲಿ ಈ ಕೃತಿಯು ಮೂಡಿ ಬಂದಿದೆ. ಶಿಕ್ಷಕರ ಮೇಲಾಗುವ ಶೋಷಣೆ, ಶೈಕ್ಷಣಿಕ ರಂಗದ ದುರವಸ್ಥೆಗಳಿಗೆ ಹಿಡಿದ ಕನ್ನಡಿಯಾಗಿ ಈ ಪುಸ್ತಕ ನಿರೂಪಿಸಲ್ಪಟ್ಟಿದೆ. ನಿರುದ್ಯೋಗದ ಸಮಸ್ಯೆಯಿಂದ ಬಳಲಿ, ಕೊನೆಗೆ ಖಾಸಗೀ ಸಂಸ್ಥೆಗಳಲ್ಲಿ ಹೊಸತಾಗಿ ಸೇರಿಕೊಳ್ಳುವ ಯುವ ಶಿಕ್ಷಕರು ಯಾವ ರೀತಿ ತಮ್ಮ ಮೇಲಾಗುವ ಶೋಷಣೆಯನ್ನು ಅಸಹಾಯಕವಾಗಿ, ಬೇಸತ್ತು ಸಹಿಸಿಕೊಂಡು ಕಾರ್ಯ ನಿರ್ವಹಿಸುತ್ತಾರೆ ಎನ್ನುವ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ.
©2024 Book Brahma Private Limited.