ಭಾರತದ ಖ್ಯಾತ ಕಥೆಗಾರ ಆರ್.ಕೆ. ನಾರಾಯಣ ಅವರ ಇಂಗ್ಲಿಷ್ ಕಾದಂಬರಿಯನ್ನು ಲೇಖಕ ಪೆರ್ಲ ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಮಹಾತ್ಮನಿಗಾಗಿ ಕಾಯುತ್ತಾ. ಮಹಾತ್ಮ ಗಾಂಧೀಜಿಯನ್ನು ಅವರ ತತ್ವ-ಸಿದ್ಧಾಂತ ಹಾಗೂ ಹೋರಾಟಗಳ ಕುರಿತು ಮಾಹಿತಿ ತಿಳಿಯದೇ ಸ್ವಾತಂತ್ಯ್ರ ಹೋರಾಟದಲ್ಲಿ ಧುಮುಕುವ ಬಹುತೇಕರಂತೆ ಕಥಾ ನಾಯಕನಾದ ಶ್ರೀರಾಮ ಹಾಗೂ ನಾಯಕಿ ಭಾರತಿ ಸಹ ಇದ್ದು, ಜೊತೆಗೆ ತಮ್ಮ ಪ್ರೇಮ ವ್ಯವಹಾರದಲ್ಲಿ ಆಸಕ್ತರಾಗಿರುತ್ತಾರೆ. ತಮ್ಮ ಪ್ರೇಮ ಹಾಗೂ ಸ್ವಾತಂತ್ಯ್ರ ಹೋರಾಟ ಈ ಎರಡನ್ನೂ ಹದವಾಗಿ ಬೆರೆಸಿ, ರಚಿಸಿದ ಕಾದಂಬರಿ ಇದು. ಅನುವಾದವೂ ಸಹ ತುಂಬಾ ಆತ್ಮೀಯವಾಗಿದೆ.
©2024 Book Brahma Private Limited.