ಇಂಗ್ಲೆಂಡ್ ನ ಚಾಲ್ಸ್ ಡಿಕೆನ್ಸ್ ಮಹಾಕವಿಯ ಮೂಲ ಕಾದಂಬರಿಯ ಸಂಗ್ರಹ ಅನುವಾದವೇ ಆಲಿವರ್ ಟ್ವಿಸ್ಟ್. ಜಿ.ಪಿ. ರಾಜರತ್ನಂ ಅವರು ಮಕ್ಕಳಿಗಾಗಿ ಈ ಕೃತಿಯನ್ನು ಮೂಲ ಕಥೆಗೆ ಧಕ್ಕೆಯಾಗದ ರೀತಿಯಲ್ಲಿ ಅನುವಾದಿಸಿ ಸಂಗ್ರಹಿಸಿದ್ದಾರೆ. ಅವರೇ ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ‘ವಿಶ್ವಾದ್ಯಾಂತ ಜನಪ್ರಿಯಗೊಂಡ ಆಲಿವರ್ ಟ್ವಿಸ್ಟ್ ’ ಕಾದಂಬರಿಯನ್ನು ನಮ್ಮ ಕನ್ನಡದ ಮಕ್ಕಳಿಗೆ ತಂದು ಕೊಡುವ ಪ್ರಯತ್ನ ಮಾಡಿದ್ದೇನೆ. ಡಿಕೆನ್ಸ್ ಕಾವ್ಯದ ಅನೇಕ ಅಂಶ ಕೈ ಬಿಟ್ಟು ಹೋಗಿದೆ ಎಂಬುದು ನಿಜ. ಆದರೂ, ಕಥೆ ಕೆಡದ ಹಾಗೆ, ಮುಖ್ಯ ಪಾತ್ರಗಳ ಕಥೆ ಆದಷ್ಟು ಉಳಿಯುವ ಹಾಗೆ, ಇಂಗ್ಲಿಷ್ ಜನಜೀವನದ ವಾಸನೆ ಅದಕ್ಕೆ ಅಪರಿಚಿತರಾದ ನಮ್ಮ ಮಕ್ಕಳಿಗೆ ಅನಾವಶ್ಯಕವಾಗಿ ಹೊರೆಯಾಗದ ಹಾಗೆ, ಡಿಕೆನ್ಸಿಗೆ ಬಡವರ ಬಗ್ಗೆ ಇದ್ದ ಅಪಾರವಾದ ಕರುಣೆಯ ಛಾಯೆ ಕೊರೆಯಾಗದ ಹಾಗೆ ಈ ಕಾದಂಬರಿಯನ್ನು ಸಂಗ್ರಹಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
©2025 Book Brahma Private Limited.