ಕೋಹಿನೂರು- ಬಂಗಾಳ ಮೂಲದ ಕಾದಂಬರಿ. ಅದನ್ನು ಬಿ.ವೆಂಕಟಾಚಾರ್ಯರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊಗಲ್ ಸಾಮ್ರಾಟ ಅಕಬರ ಷಹಾನು ‘ಯಾವ ದಿನ ಮೊಗಲ್ ಸಾಮ್ರಾಟನು ಈ ವಿಸ್ತಾರವಾದ ಸಾಮ್ರಾಜ್ಯವನ್ನು ಆಳುವಲ್ಲಿ ಹಿಂದೂಗಳಿಗೂ -ಮುಸಲ್ಮಾನರಿಗೂ ಭೇದವನ್ನುತೋರಿಸುವನೋ ಆ ದಿನವೇ ಈ ರತ್ನ ಸಿಂಹಾಸನವು ಪುಡಿಚೂರ್ಣವಾಗಿ ಹೋಗುವುದೆಂದು ತಿಳಿಯಿರಿ’ ಎಂದು ಹೇಳಿದ್ದ. ಆ ದಿನಗಳು ಔರಂಬಜೇಬನ ಕಾಲಕ್ಕೆ ಬಂದವು. ಮೊಗಲ್ ಸಾಮ್ರಾಜ್ಯದ ಅಳಿವು ಆರಂಭವಾಯಿತು. ಈ ನಿಟ್ಟಿನಲ್ಲಿ ಸಾಗುವ ಐತಿಹಾಸಿಕ ವಸ್ತುವಿನ ಕಾದಂಬರಿ ಇದು.
©2024 Book Brahma Private Limited.