ʼಸಮ್ಮೋಹನಾಸ್ತ್ರʼ ತೆಲುಗು ಕಾದಂಬರಿಯನ್ನು ಲೇಖಕ ಆರ್.ವಿ ಕಟ್ಟೀಮನಿ, ತಡಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅರುವತ್ತರ ದಶಕದಲ್ಲಿ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಪರೊಪಯುಮೋ ಸ್ಕ್ಯಾಂಡಲ್‌ನಲ್ಲಿ ಖ್ಯಾತರಾದ ಕ್ರಿಸ್ಟಿನ್ ಕೀರ್ಲನ್‌ರಿಂದ ಸ್ಪೂರ್ತಿ ಪಡೆದು ತೆಲುಗಿನಲ್ಲಿ ಲೇಖಕ ಶಾಂತರಾಮ ಅವರು ತೆಲುಗಿನ್ಲಲಿ ರಚಿಸಿದ ಕಾದಂಬರಿ ಇದು. ಕನ್ನಡ ಪತ್ರಿಕೆಯಲ್ಲಿಈ ಅನುವಾದಿತ ಕಾದಂಬರಿಯು ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಬ್ರಿಟನಿನಲ್ಲಿ ಹಗರಣವೆಬ್ಬಿಸಿದ ಭಾರತೀಯ ಸಂಜಾತೆ ಪಮೇಲಾ ಬೋರ್ಡೆಸ್ ಅವರ ಕುರಿತಾದ ವಿಷಯಗಳು ಈ ಕಾದಂಬರಿಯಲ್ಲಿ ಉಲ್ಲೇಖವಾಗಿದೆ. ದೇಶಗಳ ನಡುವಿನ ವೈಮನಸ್ಸು ಜೊತೆಗೆ ಸ್ನೇಹಭಾವಗಳೊಂದಿಗೆ ಸಾಗುವ ಕಥೆಯು ಸರಳ ಭಾಷೆಯಲ್ಲಿ ಕನ್ನಡಕ್ಕೆ ಅನುವಾದವಾದವಾಗಿದೆ.
ಲೇಖಕ ಆರ್.ವಿ. ಕಟ್ಟೀಮನಿ ಅವರು ತೆಲುಗು ಲೇಖಕ ಯಂಡಮೂರಿ ವೀರೇಂದ್ರನಾಥ ಅವರ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಇತಿಹಾಸ ಕಲಿಸುವ ಪಾಠ, ದುಡ್ಡು ಮೈನಸ್ ದುಡ್ಡು, ಮಳೆಗಾಲದ ಒಂದು ಸಂಜೆ, ಪರಿಮಳ (ಅನುವಾದಿತ ಕೃತಿಗಳು), ...
READ MORE