‘ಎಲ್ಲಿಯೂ ನಿಲ್ಲದಿರು’ ಕೃತಿಯು ಪ್ರಪಂಚದ ಅತ್ಯಂತ ಮಹತ್ವದ ಲೇಖಕ-ಚಿಂತಕರಲ್ಲಿ ಒಬ್ಬನಾದ ಫ್ರೆಡರಿಕ್ ನೀಷೆ ಬರೆದ ‘ದಸ್ ಸ್ಪೋಕ್ ಜರತೋಸ್ತ್ರ’ಎಂಬ ತಾತ್ವಿಕ ಕೃತಿಯ ಅನುವಾದ. ಲೇಖಕ ಟಿ.ಡಿ. ರಾಜಣ್ಣ ತಗ್ಗಿ ಅನುವಾದಕರು.
ಇದು ಅತ್ಯಂತ ಪ್ರಬುದ್ಧ ಮತ್ತು ಪ್ರತಿಭಾವಂತರು ಮತ್ತು ಚಿಂತಕರು ಅಗತ್ಯವಾಗಿ ಪರಿಗಣಿಸಲೇಬೇಕಾದ ವಿನೂತನ ಚಿಂತನಾಕ್ರಮಗಳ ಪುಸ್ತಕ. ಸಾಮಾನ್ಯರಲ್ಲಿ ಅತಿಸಾಮಾನ್ಯರು, ಮೇಧಾವಿಗಳಲ್ಲಿ ಅತಿ ಮೇಧಾವಿಗಳು ನಂಬಿದ ಮೌಲ್ಯಗಳನ್ನು ಒಡೆದು ಹಾಕುವ, ದೇವರು, ಧರ್ಮ, ನಂಬಿಕೆ, ಪರಂಪರೆ, ನೈತಿಕತೆ, ಇತಿಹಾಸ ಅಷ್ಟೇ ಅಲ್ಲದೆ ಸಾಮಾಜಿಕ, ವೈಯಕ್ತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ಗೇಲಿ ಮಾಡುತ್ತಾ, ಜನರಲ್ಲಿ ದಿಗ್ಭ್ರಮೆ, ಸಂಚಲನ, ಆಘಾತ, ಅರಾಜಕತೆ ಎಲ್ಲವನ್ನೂ ಏಕಕಾಲದಲ್ಲಿಯೇ ಉಂಟುಮಾಡುವ ಆಗಾಧ ಪ್ರತಿಭಾ ಕೃತಿ. ಇದು ಜನಪ್ರಿಯ, ಲೋಕಪ್ರಿಯ, ವಿಶ್ವಮಾನ್ಯ, ಸಾರ್ವಕಾಲಿಕ ಎಂದು ಕರೆಯುವ ಎಲ್ಲ ಸಿದ್ಧಾಂತಗಳನ್ನು, ವಿಚಾರಗಳನ್ನು ಮತ್ತು ಸಂಕಥನ ಗಳನ್ನುನಿರ್ದಾಕ್ಷಿಣ್ಯವಾಗಿ ಛಿದ್ರಿಗೊಳಿಸುವ ಕೃತಿ ಎಂದು ಕೃತಿಗೆ ಬೆನ್ನುಡಿ ಬರೆದ ಲೇಖಕ ಬಸವರಾಜ ಡೋಣೂರ ಪ್ರಶಂಸಿಸಿದ್ದಾರೆ.
.
©2024 Book Brahma Private Limited.