ತಮಿಳಿನ ಲೇಖಕ ಪೆರುಮಾಳ್ ಮುರುನ್ ಅವರ ‘ಪೋಕುಳಿ’ ಕಾದಂಬರಿಯ ಕನ್ನಡ ಅನುವಾದ ‘ಹೂ ಕೊಂಡ. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಲೇಖಕ ಕೆ. ನಲ್ಲತಂಬಿ. ಅನುವಾದಕ ನಲ್ಲತಂಬಿ ಃಏಳುವಂತೆ, ‘ ಈ ಪುಸ್ತಕದ ಮೂಲ ತಮಿಳು, ಲೇಖಕರು ಪೆರುಮಾಳ್ ಮುರುಗನ್. ಇದು ನಾನು ಅನುವಾದಿಸುತ್ತಿರುವ ಅವರ ಎರಡನೆಯ ಕಾದಂಬರಿ. ಇದು ಸಹ ತಮಿಳುನಾಡಿನ ಒಂದು ಭಾಗಕ್ಕೆ ಸೇರಿದ ಭಾಷಾ ರೂಪವನ್ನು ತಾಳಿದ್ದರೂ ಅವರ ಮೊದಲ ಪುಸ್ತಕವಾದ ‘ಅರ್ಧನಾರೀಶ್ವರ’ನನ್ನು ಅನುವಾದಿಸಿದಾಗ ಉಂಟಾದ ತೊಂದರೆಗಳು ಆಗಲಿಲ್ಲ. ಅವರ ಭಾಷೆಯ ಪರಿಚಯವಿದ್ದದ್ದರಿಂದ ಸ್ವಲ್ಪ ಸುಲಭವಾಗಿಯೇ ಅನುವಾದಿಸಲು ಸಾಧ್ಯವಾಯಿತು’ ಎಂದಿದ್ದಾರೆ. ‘ಮುರುಗನ್ ಅವರು ಸಾಹಿತ್ಯ ಚರಿತ್ರೆಯ ಉನ್ನತ ದಾಖಲೆಗಾರ.ಅವರು ತಮ್ಮ ಸೃಜನಶೀಲತೆಯ ಉತ್ತಂಗುದಲ್ಲಿದ್ದಾರೆ’ ಎಂಬುದಾಗಿ ದ ಹಿಂದೂ ಪತ್ರಿಕೆಯಲ್ಲಿ ಬಂದಿರುವ ಸಾಲುಗಳು ಕೃತಿಯ ಬೆನ್ನುಡಿಯಲ್ಲಿದೆ.
ಮನೆ ಭಾಷೆ ತಮಿಳಾಗಿದ್ದರೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತಮ್ಮದೇ ಅಸ್ತಿತ್ವ ಕಂಡುಕೊಂಡಿರುವ ಲೇಖಕ ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ‘ಅರ್ಧನಾರೀಶ್ವರ’, ‘ಹುಣಿಸೆಮರದ ಕಥೆ’, ‘ಹಳ್ಳ ಬಂತು ಹಳ್ಳ’, ಗುಡಿಗಂಟೆ ಮತ್ತು ಇತರ ಕಥೆಗಳು, ಬಾಪೂ ಹೆಜ್ಜೆಗಳಲ್ಲಿ, ಮತ್ತೊಂದು ರಾತ್ರಿ, ಅತ್ತರ್, ಸರಸವಾಣಿಯ ಗಿಣಿಗಳು, ಕೋಶಿ’ಸ್ ಕವಿತೆಗಳು, ಹತ್ತು ತಮಿಳು ಕತೆಗಳು, ಗೂಳಿ, ಹೂ ಕೊಂಡ, ಪೊನಾಚ್ಚಿ, ಅವರ ಅತ್ಯಂತ ಗಮನಾರ್ಹ ಕೃತಿಗಳು. ...
READ MORE