ತೆಲುಗು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರು ರಚಿಸಿದ ಕಾದಂಬರಿ-ತುಳಸೀದಳ.ಸಾಹಿತಿ ವಂಶಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾಟ-ಮಂತ್ರಗಳ ಹಾಗೂ ತಂತ್ರಜ್ಞಾನದ ವಿಜ್ಞಾನದ ಮುಖಾಮುಖಿಯು ಕಾದಂಬರಿಯ ವಸ್ತು. ಅತ್ಯಂತ ರೋಮಾಂಚಕಾರಿಯಾಗಿ ನಿರೂಪಿಸಲಾಗಿದೆ. ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುವಕೊಳ್ಳುತ್ತದೆ. ಶ್ರೀಧರ್ ಹಾಗೂ ಶಾರದಾ ದಂಪತಿಯ ಮಗಳು-ತುಳಸಿ. ಅವಳ ಹೆಸರಿಗಿರುವ ಆಸ್ತಿಯನ್ನು ಪಡೆಯಲು ಮಾಟ-ಮಂತ್ರದ ಮೊರೆ ಹೋಗುವುದು, ಅವಳಿಗಾಗುವ ತೊಂದರೆಗಳನ್ನು ವೈಜ್ಞಾನಿಕವಾಗಿ ಪರಿಹರಿಸುವ ಯತ್ನ, ಧರ್ಮಿಕ ಯತ್ನವೂ ಇದೆ. ಈ ಮಧ್ಯೆ ಮನುಷ್ಯನ ಪ್ರತಿಕಾರದ ದ್ವೇಷ,.. ಹೀಗೆ ಹತ್ತು ಹಲವು ಸನ್ನಿವೇಶಗಳಲ್ಲಿ ಸಿಕ್ಕುವ ವಸ್ತು-ವ್ಯಕ್ತಿಗಳು ಕಾದಂಬರಿಯ ಕುತೂಹಲ ಕೆರಳಿಸುತ್ತಾ ಹೋಗುತ್ತವೆ.
ಸ್ವತಃ ಪ್ರಕಾಶಕರಾದ ವಂಶಿ ಅವರು ಯಂಡಮೂರಿ ವೀರೇಂದ್ರನಾಥ ಅವರ ಆನಂದೋಬ್ರಹ್ಮ, ಬೆಳದಿಂಗಳ ಬಾಲೆ, ತುಳಸಿ, ಪ್ರಾರ್ಥನೆ, ತುಳಸಿ ದಳ ಇತ್ಯಾದಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE