ಅಮ್ಮಿ ರಾಹು ಅವರ ಅನುವಾದಿತ ಕೃತಿಯಾಗಿದೆ. ಜೀವನದುದ್ದಕ್ಕೂ ನಾಟಕೀಯವಾದ ಸನ್ನಿವೇಶಗಳನ್ನೇ ಎದುರಿಸಿದ ವ್ಯಾಪಾರಿ ಬರಹಗಾರರಾದದ್ದೂ ನಾಟಕೀಯವಾದ ಘಟನೆಯಿಂದ. ಅನಿರೀಕ್ಷಿತವಾಗಿ ಶ್ರೇಷ್ಠ ಬರಹಗಾರ್ತಿ, ಹೋರಾಟಗಾರ್ತಿ ಮಹಾಶ್ವೇತಾದೇವಿಯವರು ಇವರು ಓಡಿಸುತ್ತಿದ್ದ ರಿಕ್ಷಾದಲ್ಲಿ ಪ್ರಯಾಣ ಮಾಡುತ್ತಾರೆ. ಈತ ಸಾಹಿತ್ಯ ಓದುತ್ತಾನೆ ಎಂದು ತಿಳಿದುಕೊಂಡ ಅವರು ನೀನು ನಿನ್ನ ಬಗ್ಗೆ ಬರೆಯಬೇಕು ಎಂದು ಹೇಳುತ್ತಾರೆ. ಬರೆದದ್ದನ್ನು ಪ್ರಕಟಿಸುತ್ತಾರೆ. ಅಲ್ಲಿಂದ ಬ್ಯಾಪಾರಿಯವರಿಗೆ ಇನ್ನೊಂದು ಪುನರ್‌ಜನ್ಮ. ಬರಹಗಳಿಂದ ಪ್ರಸಿದ್ಧಿ, ಸ್ಥಾನಮಾನಗಳು ದೊರೆಯಲಾರಂಭಿಸುತ್ತವೆ. ಹಾಗಂತ ಸಿನಿಮೀಯ ರೀತಿಯಲ್ಲಿ ಅವರ ಬದುಕು ಬದಲಾಗುವುದಿಲ್ಲ. ರಾಜಕೀಯ ಹೋರಾಟಗಳಲ್ಲಿ ಸಕ್ರಿಯವಾಗುತ್ತಾರೆ. ಕೃತಿಯಕೊನೆಯ ಭಾಗದಲ್ಲಿ ಛತ್ತೀಸ್‌ಗಡದಲ್ಲಿ ಶಂಕರ್‌ಗುಹಾ ನಿಯೋಗಿಯವರ ಹಿಂಬಾಲಕರಾಗಿ ಮಾಡಿದ ಹೋರಾಟಗಳ ಕಥನವಿದೆ. ಈ ಭಾಗವೇ ಒಂದು ಸ್ವತಂತ್ರ ಕೃತಿಯ ಹಾಗೆ ಭಾರತೀಯ ರಾಜಕೀಯದ ವ್ಯಾಖ್ಯಾನವಾಗಿದೆ. ಈ ಕೃತಿಯು ಸೈದ್ಧಾಂತಿಕವಲ್ಲ. ಆದರೆ ಹಿರಿದಾದ ಅರ್ಥದಲ್ಲಿ ಎನ್ನುವ ಮಾದರಿಯ ರಾಜಕೀಯ ಕೃತಿಯಾಗಿದೆ. ಒಂದು ಕಡೆ ಬ್ಯಾಪಾರಿ ಎನ್ನುವ ಈ ವ್ಯಕ್ತಿಯ ಬದುಕುವಛಲ, ಪ್ರತಿಭೆ, ಪ್ರತಿರೋಧ ಇವುಗಳ ಪ್ರಭಾವಿ ಕಥನವಾಗಿದ್ದರೆ ಇನ್ನೊಂದೆಡೆ ಆಧುನಿಕ ಭಾರತದ, ಸಮಾಜದ ಅನಾರೋಗ್ಯ ಕ್ರೌರ್ಯಗಳ ಅನಾವರಣವೂ ಆಗಿದೆ.ದಲಿತ ಬರಹಗಳಲ್ಲಿ ಬಹು ಮುಖ್ಯವಾದುದು ಅಂದರೆ ವೈಯಕ್ತಿಕ ಅನುಭವ ಹಾಗೂ ಚಿಂತನೆಗಳ ನಿರೂಪಣೆ. ಈ ಆತ್ಮಕಥೆಯಲ್ಲಿ ‘ದಲಿತ’ ಎಂದು ಪ್ರತ್ಯೇಕವಾಗಿ ಗುರುತಿಸುವ ಅಂಶಗಳು ಪ್ರಧಾನವಲ್ಲ. ಏಕೆಂದರೆ ಬ್ಯಾಪಾರಿ ಆಧುನಿಕ ಭಾರತದ ಪ್ರಜೆ. ಇಲ್ಲಿಯ ರಾಜಕೀಯದಲ್ಲಿ ಕ್ರಿಯಾಶೀಲರು. ಜೊತೆಗೆ ಅವರು ದಲಿತರೂ ಹೌದು. ಅವರ ಅನುಭವ ಜಾತಿ ಕೇಂದ್ರಿತವಲ್ಲದ ಸಮಕಾಲೀನ ದಂದುಗಗಳನ್ನು ಒಳಗೊಂಡಿದೆ.
ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು . ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ...
READ MORE