ತೆಲುಗು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರ ಕಾದಂಬರಿ-ತುಳಸಿ. ಕಾಲೇಜು ವಿದ್ಯಾರ್ಥಿನಿ-ತುಳಸಿ. ವೈಜ್ಞಾನಿಕ ಮನೋಧರ್ಮ ಆಕೆಯದು. ಆದರೂ, ಮಾತ್ರಿಕತೆಗೆ ಒಳಗಾಗುವ, ನಂತರದ ಪರಿಣಾಮಗಳನ್ನು ಒಪ್ಪಿಕೊಳ್ಳುವ ಪಾತ್ರವಾಗಿ, ವೈಜ್ಞಾನಿಕತೆಗೆ ಸವಾಲಾಗುತ್ತಾಳೆ. ಕಾದಂಬರಿಯ ಸನ್ನಿವೇಶಗಳು ವಿಜ್ಞಾನವನ್ನು ಪ್ರಶ್ನಿಸುವ ಮೂಲಕ ಓದುಗರನ್ನು ರೋಮಾಂಚನಗೊಳಿಸುತ್ತವೆ. ಅರ್ಯತುಂಗ, ಖೇಚರಿ ಹೀಗೆ ಅನೇಕ ಮಾಂತ್ರಿಕ ವಿದ್ಯೆಗಳ ಮಾಹಿತಿ ನೀಡುತ್ತದೆ. ಕಾಲ್ಪನಿಕವಾಗಿದ್ದರೂ ಈ ಕಾದಂಬರಿಯು ತನ್ನ ನಿರೂಪಣಾ ಶೈಲಿಯಿಂದ ಹಾಗೂ ಸನ್ನಿವೇಶಗಳ ಸೃಷ್ಟಿಯಿಂದ ಗಮನ ಸೆಳೆಯುತ್ತದೆ.
©2024 Book Brahma Private Limited.