ಮೊದಲು ತನ್ನವರನ್ನು ನಂಬು, ನಂತರ ಪರರನ್ನು ನಂಬು. ಒಂದಕ್ಕೆ ಹತ್ತು ಸೇರಿಸಿ ಸಾವಿರ ಹೇಳುತ್ತೆ ಈ ಈ ಸಮಾಜ.. ಅದನ್ನೆಲ್ಲ ನಂಬಲು ಹೋದವ ಮೂರ್ಖನೇ! ಸಾಧು, ಸಾತ್ವಿಕ ಸ್ವಭಾವದ ಮಗ ಪರೀಕ್ಷೆಯಲ್ಲಿ ನಕಲು ಮಾಡಲು ಸಾಧ್ಯವೇ ಎಂದು ಕಿಂಚಿತ್ತೂ ಯೋಚಿಸದ ಅಯ್ಯರ್, ಮನೆ ಮಾನ ಮರ್ಯಾದೆ ಹರಾಜಾಯಿತೆಂದು ಗೋಳಾಡಿದ್ದು ಎಷ್ಟು ಸರಿ! ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಂತಾರೆ, ಆದರೆ ಪರೀಕ್ಷೆ ನಡೆಯುವ ಮುಂಚೆಯೇ ನಾನು ಪಾಸ್ ಅಂದುಬಿಟ್ಟರೆ? ಕುರುಕ್ಷೇತ್ರದಲ್ಲಿ ಅರ್ಜುನ ಗಾಂಡೀವ ಎಂಬ ದಿವ್ಯ ಧನುಸ್ಸನ್ನು ಬಳಸಿದಾಗ ಅವನನ್ನು ಸೋಲಿಸುವವರೇ ಇರಲಿಲ್ಲ.. ಯಾರಿಗೇ ಆಗಲಿ ಗಾಂಡೀವ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ.. ಹಲವಾರು ವಿಶೇಷತೆಗಳನ್ನು ಹೊಂದಿದ ಗಾಂಡೀವ, ಬಿಲ್ಲನ್ನು ಹೊಡೆದಾಗ ಗುಡುಗಿನಂತಹ ಧ್ವನಿ ಕೇಳಲ್ಪಡುತಿತ್ತು.. ಗಾಂಡೀವ ಹೊತ್ತ ಗಾಂಡೀವಿ ಹೆಸರಿರುವ ಈ ಗಾಂಡೀವಿಯನ್ನು ಕೂಡ ತಡೆಯಲು ಸಾಧ್ಯವೇ! ಗಾಂಡೀವಿ ತನ್ನ ಬಾಳಿನ ಶಂಖಾಸುರನಾದ ಅಲಂಕಾರ್ ನನ್ನು, ಪಾಂಚಜನ್ಯವೆಂಬ ಶಂಖವನ್ನು ಊದಿದಾಗ ಎದುರಾಳಿಯ ಸಂಹಾರವಾಗುವುದೇ? ಈಗೆ ಹಲವು ವಿಷಯಗಳನ್ನು ಚರ್ಚಿಸುತ್ತಾ ಸಾಯಿಸುತೆ ಅವರ ಪಾಂಚಜನ್ಯ ಎಂಬ ಕಾದಂಬರಿಯೂ ಮುಂದೆ ಸಾಗುತ್ತದೆ.ಸಾಯಿಸುತೆಯವರು ಈ ಕಾದಂಬರಿಯಲ್ಲಿ ತನ್ನ ವಿಶಿಷ್ಟ ಛಾಪಿನಿಂದ ಎದ್ದು ಕಾಣುವ, ವಿದ್ಯಾರ್ಥಿ ಬದುಕಿನ ಉನ್ನತಿ ಅವನತಿಯ ವಿವಿಧ ಮಜಲುಗಳನ್ನು ಚಿತ್ರಿಸಿ ಓದುಗರ ಮುಂದೆ 'ಪಾಂಚಜನ್ಯ' ಎಂಬ ಕಾದಂಬರಿಯ ಮೂಲಕ ಇಟ್ಟಿದ್ದಾರೆ.ಈ ಕಾದಂಬರಿಯನ್ನು ಓದುವಾಗ, ಈ ಎಲ್ಲಾ ಹಂತ ದಾಟಿ ಬಂದಿರುವ ನಮಗೆ, ನೆನಪುಗಳು ನಮ್ಮ ಕಣ್ಣೆದುರು ಬರುತ್ತವೆ.
©2024 Book Brahma Private Limited.