“ಅನುಕ್ಷಣ ಕಷ್ಟಪಡಲು ಬೇಕಾದ ಶಕ್ತಿಯನ್ನು, ಅನುಕ್ಷಣ ಆನಂದಿಸುವುದರ ಮೂಲಕ ಪಡೆಯಿರಿ”
“ಕಥೆ ಎಂದರೆ ಬೇಕಾದ ಜಾಗದಲ್ಲಿ ಆನಂದವನ್ನು ಅಂಟಿಸಬಹುದು. ಬೇಡವೆಂದರೆ ವಿಷಾದವನ್ನು ಕಿತ್ತುಹಾಕಬಹುದು. ಜೀವನ ಹಾಗಲ್ಲ” - ಇಂತಹ ವಿಶಿಷ್ಟ ಸೂಕ್ತಿಗಳ ಮೂಲಕ ಓದುಗರನ್ನು ಸೆಳೆಯುವ ಕೃತಿ ‘ಲೇಡೀಸ್ ಹಾಸ್ಟೆಲ್’. ಲೇಡಿಸ್ ಹಾಸ್ಟೆಲ್‌ನಲ್ಲಿ ಹೆಣ್ಣು ಮಕ್ಕಳ ಪಾಡು, ಸೆಳೆಯುವ ಮೋಸದ ಜಾಲದ ಕುರಿತ ಕತಾಹಂದರ ಓದುಗರನ್ನು ರೋಚಕತೆಯ ತುತ್ತ ತುದಿಯಲ್ಲಿ ನಿಲ್ಲಿಸುತ್ತದೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE