ಲೇಖಕ ಜಯಮೋಹನ್ ಅವರ ನೂರು ಸಿಂಹಾಸನಗಳು ಕಾದಂಬರಿಯನ್ನು ಅನುವಾದಕರಾದ ಪ್ರಭಾಕರನ್ ಕೆ ಕನ್ನಡಕ್ಕೆ ತಂದಿದ್ದಾರೆ.
ಸಮಾಜದ ತೀರ ಹಿಂದುಳಿದ ವರ್ಗದಿಂದ ಬಂದು ಸಮಾಜ ಸುಧಾರಕರ ಆಶ್ರಯದಲ್ಲಿ ವಿದ್ಯೆ ಕಲಿತು ಸಿವಿಲ್ ಸರ್ವೀಸ್‍ನಲ್ಲಿ ಉತ್ತೀರ್ಣಗೊಂಡ ಒಬ್ಬ ಐಎಎಸ್ ಅಧಿಕಾರಿಯ ವ್ಯಥೆಯ ಕಥೆಯನ್ನು ಈ ಕಾದಂಬರಿ ಚಿತ್ರಿಸುತ್ತದೆ. ಬಾಲ್ಯದ ದಿನಗಳಲ್ಲಿ ತಾಯಿಯೊಂದಿಗೆ ಆಹಾರಕ್ಕಾಗಿ ಅಲೆದಾಡುತ್ತಾ "ಕಾಪ್ಪಾಗೆ ಅನ್ನ, ಕಾಪ್ಪಾಗೆ ಅನ್ನ" ಎಂದು ಬೊಬ್ಬಿಡುತ್ತ ಕಳೆದ ದಿನಗಳನ್ನು ಸ್ಮರಿಸುತ್ತ, ಇಂದಿನ ಐಷಾರಾಮಿ ದಿನಗಳಿಗೆ ತಾಳೆ ಹಾಕುತ್ತ ಅಸಮಾಧಾನಗೊಂಡು ತನ್ನ ಅಸಹಾಯಕತೆಗಾಗಿ ಮರುಗುವ ಒಂದು ಹೃದಯಸ್ಪರ್ಶಿ ಚಿತ್ರಣ. ವ್ಯವಸ್ಥೆ ಬದಲಿಸಲು ಒಂದು ಕುರ್ಚಿ ಸಾಲದು, ನೂರು ಸಿಂಹಾಸನಗಳೇ ಬೇಕೆಂದು ಸಾರುವ ಕಥನ ಇದಾಗಿದೆ.
©2024 Book Brahma Private Limited.