ಮದಾಂ ಬೊವಾರಿ

Author : ವಿ. ನಾಗರಾಜ ರಾವ್

Pages 131

₹ 25.00




Year of Publication: 2007

Synopsys

ಫ್ರಾನ್ಸಿನ ಹತ್ತೊಂಬತ್ತನೇ ಶತಮಾನದ ಕಾದಂಬರಿಕಾರರಲ್ಲಿ ಪ್ರಸಿದ್ಧರಾದವರು ಗುಸ್ತಾವ್ ಫ್ಲೋಬರ್. ವಾಸ್ತವವಾದಿ ಚಳವಳಿಯ ಪ್ರಮುಖ ಧಾರೆಯಾದ ’ಸಾಹಿತ್ಯಿಕ ವಾಸ್ತವವಾದ’ದ ಪ್ರವರ್ತಕ ಈತ. 

ಫ್ಲೋಬರ್‌ ನ ಮೊದಲ ಕೃತಿಯೂ ಆಗಿರುವ ’ಮದಾಂ ಬೊವಾರ’ ೧೮೫೬ರಲ್ಲಿ ಪ್ರಕಟವಾಯಿತು. 

ಹತ್ತೊಂಬತ್ತನೇ ಶತಮಾನದ ಫ್ರಾನ್ಸಿನ ಹೆಣ್ಣುಮಗಳೊಬ್ಬಳ ಜೀವನಗಾಥೆಯನ್ನು ಕಾದಂಬರಿ ಕಟ್ಟಿಕೊಡುತ್ತದೆ. ರಮ್ಯ ಜೀವನದ ಆಕರ್ಷಣೆಗೆ ಒಳಗಾಗಿ ಅದನ್ನು ನನಸು ಮಾಡಿಕೊಳ್ಳುವ ಭರದಲ್ಲಿ ಸಾಮಾನ್ಯಸ್ತರದ ವ್ಯಕ್ತಿಯೊಬ್ಬನನ್ನು ಆಕೆ ಮದುವೆಯಾಗುತ್ತಾಳೆ. ಆದರೆ ಮನುಷ್ಯ ಸಹಜ ಕಾಮನೆಗಳು ಅಷ್ಟಕ್ಕೇ ಬಿಡುವುದಿಲ್ಲ. 

ತನ್ನ ಮಾನಸಿಕ ಜಂಜಡಗಳನ್ನು ಕಳೆದುಕೊಳ್ಳಲು ಹಲವಾರು ಪ್ರೇಮಿಗಳ ಸಂಗದಲ್ಲಿ ಬೀಳುತ್ತಾಳೆ. ತತ್ಫಲವಾಗಿ ಬಂದ ಸಂಕಷ್ಟಗಳನ್ನು ಸಹಿಸಲಾರದೆ, ಆ ಪ್ರೇಮಿಗಳೆಲ್ಲರಿಂದಲೂ ದೂರವಾಗುತ್ತಾಳೆ. ಕಡೆಗೆ ವಿಷ ಸೇವಿಸಿ ಬದುಕನ್ನು ನಾಶ ಮಾಡಿಕೊಳ್ಳುತ್ತಾಳೆ. 

ಹತ್ತೊಂಬತ್ತನೇ ಶತಮಾನದ ಐರೋಪ್ಯ ಸಮಾಜದ ಸ್ಥಿತಿಗತಿಗಳನ್ನೂ ಕೃತಿ ಬಿಚ್ಚಿಡುತ್ತಾ ಹೋಗುತ್ತದೆ. 

Related Books