ಇಂಗ್ಲೆಂಡಿನ ಲೇಖಕನಾದ ವಿಲಿಯಂ ಡಾಲ್ರಿಂಪನ್ ನ ’ನೈನ್ ಲೈವ್ಸ್’ ಕೃತಿಯನ್ನು ಕನ್ನಡಕ್ಕೆ ’ನವ ಜೀವಗಳು’ ಎಂಬ ಶೀರ್ಷಿಕೆಯಡಿ ಅನುವಾದ ಮಾಡಿದವರು ನವೀನ ಗಂಗೋತ್ರಿ.
ಭವ್ಯ ಭಾರತದಲ್ಲಿ ದಿವ್ಯತೆಯ ಹುಡುಕಾಟ ಎಂಬ ಉಪಶೀರ್ಷಿಕೆಯಿರುವ ಈ ಕೃತಿಯು ಇಂದಿನ ’ಸ್ಪಿರಿಚ್ಯುಯಲ್ ಇಂಡಿಯಾದ ಅಪರೂಪದ ಚಿತ್ರಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಸಂಸ್ಕೃತಿಯ ಅರಿವು, ಆಯಾಯ ಧರ್ಮಶ್ರದ್ಧೆಯ ಕುರಿತಾದ ಪರಿಚಯಾತ್ಮಕ ವಿವರಣೆಗಳು ಮತ್ತು ಶ್ರದ್ಧೆಯ ಹಾದಿಯಲ್ಲಿ ಸಾಗುತ್ತಿರುವ ಜೀವಗಳ ಜೊತೆಗಿನ ,ಮಾತುಕತೆಯೇ ಆಧ್ಯಾತ್ಮಿಕ ಅನುಭೂತಿಗೂ ಮೀರಿದ ಜೀವನಪ್ರೀತಿಯನ್ನು ಈ ಕೃತಿ ಕಟ್ಟಿಕೊಡುತ್ತದೆ.
ಈ ಕೃತಿಯಲ್ಲಿ ಒಂಭತ್ತು ಜೀವಗಳ ಕತೆಗಳನ್ನು ಲೇಖಕರು ತಿಳಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳನ್ನು ಲೇಖಕರು ಇತಿಹಾಸಕಾರರಾಗಿಯೂ, ರಾಜಕೀಯ ವಿಶ್ಲೇಷಣಾಕಾರರಾಗಿಯೂ ವಿವರವಾಗಿ ಈ ಕೃತಿಯ ಮೂಲಕ ಓದುಗರಿಗೆ ಪರಿಚಯಿಸಿದ್ದಾರೆ.
©2024 Book Brahma Private Limited.