ಈ ಕಾದಂಬರಿಯಲ್ಲಿನ ಪಾತ್ರಗಳು ಕಾದಂಬರಿಯ ಮುಖ್ಯ ಆಕರ್ಷಣೆ. ಪ್ರಸ್ತುತ ಯಾಂತ್ರಿಕ ಸಮಾಜದಲ್ಲಿ ಇಲ್ಲಿನ ಯಾಂತ್ರಿಕ ರಹಿತ ಪಾತ್ರಗಳು, ಹೊಸತನವನ್ನು ಓದುಗರಲ್ಲಿ ಮೂಡಿಸುತ್ತದೆ.ಬೇಗೆಗಿಂತ ಬೆಳಕಿಗೆ ಮಹತ್ವ. ಬುದ್ಧಿ, ಭಾವದ ಹೊಂದಾಣಿಕೆಯೇ ಬರವಣಿಗೆಯ ಮುಖ್ಯ ಗುರಿ. ವಸ್ತುಗಳನ್ನು ಪ್ರೀತಿಸಲು ಹೊರಟ ಜನರ ಅಂತರಂಗ-ಬಹಿರಂಗಗಳ ಮಧ್ಯೆ ವೈರುಧ್ಯ ಸೃಷ್ಟಿಯಾಗಿದೆ. ವ್ಯಕ್ತಿಗಳನ್ನು ಪ್ರೀತಿಸಿ, ಪದಾರ್ಥಗಳನ್ನು ಬಳಸುವ ಬದಲು, ವ್ಯಕ್ತಿಗಳನ್ನು ಬಳಸಿ ಪದಾರ್ಥಗಳನ್ನು ಪ್ರೀತಿಸುವ ಮುಲಾಜಿಲ್ಲದ ಬದುಕಿನಲ್ಲಿ ‘ಪುಷ್ಕರಿಣಿ’ಯಲ್ಲಿನ ಪಾತ್ರಗಳನ್ನು ಕಾಣುವುದು ಅಪರೂಪವಾಗಿದೆ!
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE