‘ಕೊಚ್ಚರೇತ್ತಿ’ ಮಲೆಯಾಳಂ ಲೇಖಕ ನಾರಾಯಣ್ ಅವರ ಕಾದಂಬರಿಯ ಕನ್ನಡಾನುವಾದ. ಅನುವಾದಕರು ನಾ. ದಾಮೋದರ ಶೆಟ್ಟಿ. ಕೊಚ್ಚರೇತ್ತಿ’ ಅಂದರೆ ಕೊಚ್ಚು+ಅರೆಯತ್ತಿ- ಎಳೆಯ ವಯಸ್ಸಿನ ಸ್ತ್ರೀ ಎಂದರ್ಥ. ಆದಿವಾಸಿಗಳು ಮುಖ್ಯವಾಹಿನಿಗೆ ಬರಬೇಕೇ ಬೇಡವೇ ಎಂಬ ಚರ್ಚೆ ಕರ್ನಾಟಕದಲ್ಲೂ ಇದೆ. ಕಾಡಿನಿಂದ ಅವರು ಹೊರಗೆ ಬರಲಿ, ಆಧುನಿಕ ಅಭಯಾರಣ್ಯದ ಕಲ್ಪನೆಯಲ್ಲಿ ಗಿರಿಜನರು, ಆದಿವಾಸಿಗಳು ಕಾಡಿನಿಂದ ಹೊರಗೆ ಕಟ್ಟಿದ ಪುನರ್ವಸತಿ ಕೇಂದ್ರಗಳಲ್ಲಿರಬೇಕು ಎಂಬ ಆಳುವವರ ತಿಳಿವಳಿಕೆ ಪಶ್ಚಿಮ ಘಟ್ಟದ ಕಾಡುಗಳಿಗೆ ನಕ್ಸಲ್ ವಾದ ಬರುವಂತೆ ಮಾಡಿತು.
ಈಗ ಕೇರಳದ ವೈನಾಡಿನಲ್ಲಿ ಆದಿವಾಸಿ ಮಕ್ಕಳಿಗಾಗಿಯೇ ವಸತಿಶಾಲೆಗಳನ್ನು ಸರ್ಕಾರ ಮಾಡಿದೆ. ‘ಕೊಚ್ಚರೇತ್ತಿ’ ಸ್ವಾತಂತ್ರ್ಯ ಪೂರ್ವದ ಕಥನ. ಆದರೂ ಕಳೆದ ಶತಮಾನದ ಎಪ್ಪತ್ತರ ದಶಕದವರೆಗಿನ ಆರ್ಯನ್ನರ ವಿದ್ಯಾಭ್ಯಾಸ ಪಡೆದ ಮೇಲಿನ ಬದಲಾವಣೆಗಳನ್ನೂ ಒಳಗೊಂಡಿದೆ. ಮುಂದಿನ ತಲೆಮಾರು ಆಧುನಿಕತೆಯಲ್ಲಿ ಅತಂತ್ರರಾಗುವ ಚಿತ್ರವಿದೆ. ಆರ್ಯನ್ ಸಮುದಾಯದ ದೇಸಿಬನಿಯ ಮಲೆಯಾಳವನ್ನು ಅನುವಾದಿಸುವಾಗ ದಾಮೋದರ ಅವರು ಎಚ್ಚರದಿಂದ ಕಾಸರಗೋಡು ಸಮೀಪ ಬಳಕೆಯಲ್ಲಿರುವ ಕನ್ನಡ ಆಡುನುಡಿಯನ್ನು ಬಳಸಿದ್ದಾರೆ. ಇದರಿಂದಾಗಿ, ಮಲೆಯಾಳಂ ಮೂಲದ ಸಂಭಾಷಣೆಯ ಸ್ವಾರಸ್ಯ ಅನುವಾದದಲ್ಲಿ ಉಳಿದುಕೊಂಡಿದೆ. ಆದಿವಾಸಿಗಳ ಕಥೆಯನ್ನು ಒಬ್ಬ ಆದಿವಾಸಿಯೇ ಬರೆದಿರುವುದು ಈ ಕೃತಿಯ ಮಹತ್ವ. ಈ ಕುರಿತು ಲೇಖಕರು, ‘ಕೊಚ್ಚರೇತ್ತಿ’ ಓರ್ವ ಕೊಚ್ಚರೇತ್ತಿಯ ಮಗನಾದ ನಾನು ಬರೆದದ್ದು , ಯಾರನ್ನೂ ಅನುಕರಿಸಿಯೂ ಅಲ್ಲ ನನ್ನದೇ ಸ್ವಂತ ನನಗೆ ತೋಚಿದ ಶೈಲಿಯಲ್ಲಿ ಎಂದು ಹೇಳಿಕೊಂಡಿದ್ದಾರೆ.
ನಟ, ನಾಟಕಕಾರ, ಸಾಹಿತಿ ನಾ. ದಾಮೋದರ ಶೆಟ್ಟಿ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1975ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 36 ವರ್ಷಗಳ ದೀರ್ಘಸೇವೆಯ ನಂತರ 2011ರಲ್ಲಿ ನಿವೃತ್ತಿಯಾಗಿದ್ದಾರೆ. ಚಿಕ್ಕಂದಿನಿಂದಲೇ ನಾಟಕ, ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕೇರಳದ ತ್ರಿಶೂರಿನ ಸ್ಕೂಲ್ ಆಫ್ ...
READ MORE