ಹೆಸರಾಂತ ಲೇಖಕ ಕಿಂಗ್ಸ್ ಜಾನ್ಸನ್ ಅವರ ಕಾದಂಬರಿಯನ್ನು ಲೇಖಕ ಡಾ. ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಉದಕಮಂಡಲದಿಂದ ಮರಿ ಕುದುರೆಯ ಕನಸಿನ ಪಯಣ ಆರಂಭವಾಗಿ ಮತ್ತೇ ಉದಕಮಂಡಲಕ್ಕೆ ಮರಳುವವರೆಗೆ ನಡೆಯುತ್ತದೆ.ಅಗ್ನಿಶಾಮಕ ದಳ, ಕಾಳಿಂಗ ಸರ್ಪ, ಬೀರಪ್ಪನ್ ಹಾಗೂ ಸಹಚರರು, ಸುಭದ್ರಾ ಎಂಬ ಆನೆ, ಕಾಡಿನ ಅಧಿಕಾರಿಗಳು, ಹೇಸರಗತ್ತೆಗಳು, ಮೈಸೂರು ಅರಮನೆ, ಅಲ್ಲಿನ ರಾಜ ಸೇವಕರು, ರಾಜ, ರಾಣಿ, ರಾಜಮಾತೆ, ನಗರದ ರಸ್ತೆಗಳು, ದಸರೆಯ ಉತ್ಸವ ಹಾಗೂ ಜನಸಾಗರ ಎಲ್ಲವೂ ಪಾತ್ರಗಳಾಗಿ ಬಂದು ಹೋಗುತ್ತವೆ. ‘ಪಂಚತಂತ್ರ’ದ ಕತೆಗಳ ಹಾಗೆ ಈ ಕಾದಂಬರಿಯಲ್ಲಿ ಬರುವ ಎಲ್ಲ ಪ್ರಾಣಿ ಪಕ್ಷಿಗಳು ತಮ್ಮ ತಮ್ಮಲ್ಲಿ ಮಾತನಾಡುವುದರ ಜೊತೆಗೆ ಮನುಷ್ಯರ ಜೊತೆಗೂ ಮಾತನಾಡುತ್ತವೆ; ಮನುಷ್ಯರಲ್ಲಿ ಬಹಳ ವಿರಳವಾಗಿರುವ ಪ್ರೀತಿ ಸ್ನೇಹ ಮತ್ತು ಸಹಕಾರ ಈ ಕಾದಂಬರಿಯಲ್ಲಿನ ಪ್ರಾಣಿಗಳಲ್ಲಿ ಎದ್ದುಕಾಣುತ್ತದೆ. ಸಂಕಲ್ಪ ಬಲ, ಕಠಿಣ ಪರಿಶ್ರಮ, ಎಡರುತೊಡರುಗಳನ್ನು ಎದುರಿಸುವ ಛಾತಿಯಿದ್ದರೆ ಕಂಡ ಕನಸುಗಳನ್ನು ನನಸು ಮಾಡಬಹುದು, ಇಲ್ಲಿ ಯಾವುದೂ ಅಸಾಧ್ಯವಲ್ಲವೆಂಬುದು ಈ ಕಾದಂಬರಿಯ ಸಂದೇಶವಾಗಿದೆ.
ಮರಿ ಕುದುರೆಯ ಮೈಸೂರು ಕನಸು - ಪುಸ್ತಕ ಪರಿಚಯ
©2024 Book Brahma Private Limited.