ಫ್ರೆಂಚ್ ಮೂಲದ ಒನೊರೆ ದಿ ಬಾಲ್ಝಾಕ್ ಅವರ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದವರು ಪಾಲ್ ಸೇಡರ್. ಕಾಡುಕತ್ತೆಯ ಚರ್ಮ ಎಂಬ ಶೀರ್ಷಿಕೆಯಡಿ ಪ್ರೊ. ಡಿ.ಆರ್. ಮಿರ್ಜಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾಡುಕತ್ತೆಯ ಚರ್ಮ ಉತ್ತಮ ಗುಣಮಟ್ಟದ ಚರ್ಮ ಎಂಬ ನಂಬಿಕೆ ಜನರಲ್ಲಿದೆ ಎಂಬುದಕ್ಕೆ ಇತಿಹಾಸದ ಸಂಗತಿಗಳು ತಿಳಿಸುತ್ತವೆ. ಈ ಅಂಶವನ್ನು ಒಳಗೊಂಡು ಕಾದಂಬರಿ ರಚನೆಗೊಂಡಿದೆ.
ಅನುವಾದ ಕ್ಷೇತ್ರದಲ್ಲಿ ಲೇಖಕ ಡಿ.ಆರ್. ಮಿರ್ಜಿ ಅವರದ್ದು ಬಹು ದೊಡ್ಡ ಹೆಸರು. ಕೃತಿಗಳು : ಕಾಡು ಕತ್ತೆಯ ಚರ್ಮ , ಪ್ರಾಚೀನ ಭಾರತವೆಂಬ ಅದ್ಭುತ (ಅನುವಾದಿತ ಕೃತಿ), ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ ಕೃತಿಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ಧಾರೆ. ಜೆ.ಎಂ. ಕೊಯಿಜ್ ಅವರ ಕಾದಂಬರಿ ಡಿಸ್ ಗ್ರೇಸ್ ಅನ್ನು ‘ಅವಮಾನ’ ಶೀರ್ಷಿಕೆಯಡಿ ಕನ್ನಡಕ್ಕೆ ತಂದಿದ್ದಾರೆ. ...
READ MORE