ಸಾನೇ ಗುರೂಜಿ ಅವರ ಸೊಗಸಿನ ಕತೆಗಳ ಮೊದಲನೆ ಹಾಗೂ ಎರಡನೇ ಭಾಗ ಓದುಗರಿಗೆ ದೊರಕಿದ್ದು, ಈ ಆವೃತ್ತಿಯು ಮೂರನೇ ಭಾಗವಾಗಿದೆ. ಸಾನೇ ಗುರೂಜಿ ಅವರು ಬ್ರಿಟಷ್ ವಿರುದ್ಧ ಧ್ವನಿ ಎತ್ತಿದ್ದರಿಂದ ಜೈಲಿನಲ್ಲಿದ್ದರು. ಆ ಸಮಯದಲ್ಲಿ ಇತರರಿಗೆ ಹೇಳುತ್ತಿದ್ದ ಕಥೆಗಳಿವು. ಜೈಲಿನಿಂದ ಹೊರಗೆ ಬಂದ ಮೇಲೆ ಅವರ ಆಗ್ರಹದ ಮೇರೆಗೆ, ಈ ಕಥೆಗಳಿಗೆ ಅಕ್ಷರ ರೂಪ ನೀಡಿದ್ದು, ಅವರಂತೆ ಬಿಡುಗಡೆಯಾದ ಕೈದಿಗಳು ಈ ಕಥೆಗಳನ್ನು ಪ್ರಸಿದ್ಧಿ ಪಡಿಸಿದರು. ಸೊಗಸಿನ ಕಥೆಗಳು ಏಳು ಭಾಗವನ್ನು ಹೊಂದಿವೆ. ಈ ಪೈಕಿ ಈ ಆವೃತ್ತಿಯು ಮೂರನೇ ಭಾಗವಾಗಿದೆ.
ಜಾರ್ಜ್ ಇಲಿಯೇಟ್ ಎಂಬುವರು (1961) ‘ಸಿಲಾಸ ಮಾರ್ನರ್’ ಎಂಬ ಕಾದಂಬರಿ ಬರೆದಿದ್ದು, ಅಲ್ಲಿಯ ಮನುಬಾಬಾ ಕಥೆಯಲ್ಲಿಯ ಭಾಗಗಳನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಇಲ್ಲಿ ಕಥೆಯಾಗಿಸಿದೆ ಎಂದು ಸಾನೇ ಗುರೂಜಿ ಹೇಳಿದ್ದಾರೆ. ಜೀವನದಲ್ಲಿ ಉತ್ತಮವಾದ ಧ್ಯೇಯವೊಂದರಿಬೇಕು. ಅದರ ವಿಕಾಸಕ್ಕೆ ಮನುಷ್ಯ ತುಡಿಯುತ್ತಾನೆ. ಸ್ವಾರ್ಥ ತೊರೆದಾಗ ಜೀವನ ಪರಿಶುದ್ಧವಾಗುತ್ತದೆ. ಇದು ಜೀವನಪೂರ್ಣತೆಯೂ ಆಗುತ್ತದೆ ಎಂಬುದು ಈ ಕಥೆಯ ತಿರುಳು. ಸಾನೇ ಗುರೂಜಿ ಅವರು ಬರೆದ ಈ ಕಾದಂಬರಿಯನ್ನು ಭಾಸ್ಕರ ಗೋವಿಂದ ಗೋಖಲೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.