‘ಒಂದು ಊರಿನ ಕಥೆ’ ಮಲಯಾಳಂ ಕಾದಂಬರಿಯ ಕನ್ನಡಾನುವಾದ. ಎಸ್.ಕೆ. ಪೊಟ್ಟೆಕ್ಕಾಟ್ಸ್ ಅವರ ಮೂಲ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಈ ಕೃತಿಯನ್ನು ಕೆ.ಕೆ.ನಾಯರ್ ಮತ್ತು ಅಶೋಕ್ ಕುಮಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒಂದು ರಿಜಿಸ್ಟರ್ ಪತ್ರ, ಹೊಸ ಸಂಬಂಧಿಕರು, ಕುಂಜಪ್ಪು, ಸೈನಿಕ, ಹುಟ್ಟುಹಬ್ಬದೌತಣ ಮತ್ತು ಸೇನಾಕಥೆ, ಇಲಂಜಿಪೊಯಿಲ್, ತುರ್ಕಿ ಸೈನ್ಯ, ಅಪ್ಪಾಣಿಜ್ಯ, ಮನೆಪಾಯ, ಹೆಣ್ಣು ಪಡೆ ಪುನಃ ಇಲಂಜಿಪೊಯಿಲ್ ನಲ್ಲಿ, ಪೆಯಿಂಟರ್ ಕುಂಜಪ್ಪು, ಅರಿವಿನ ಉಗಮಸ್ಥಾನಗಳು, ಕಿಟ್ಟನ್ ರೈಟರ್, ದಂಗೆ, ಆಕಾಶದಲ್ಲಿನ ಶತ್ರು, ಆಯಿಷ, ಹೆಣ್ಣು ಹೊನ್ನು ಮತ್ತು ಪೊಲೀಸ್, ಮನುಷ್ಯನ ಮೂಳೆ ಮತ್ತು ರಂಜೆ ಹೂವಿನಮಾಲೆ, ಮರ್ಕಟನ್ ಗೂರ್ಖನೂ, ವೇಣುಗೋಪಾಲ, ಅಪ್ಪುವಿನ ಕೃಷಿಕ್ಷೇತ್ರದಲ್ಲಿ, ದಂಗೆಯ ದಮನ, ಸಾವಿನ ಗಾಡಿ ವಿಚಾರಗಳನ್ನು ಕೃತಿ ಒಳಗೊಂಡಿದೆ.
ಭಾಷಾಂತರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಲೇಖಕ ಕೆ. ಕೆ. ನಾಯರ್. ಕೆ. ಕೆ. ನಾಯರ್ ಅವರು ಜನಿಸಿದ್ದು ಉತ್ತರ ಕೇರಳದ ಪುಟ್ಟ ಗ್ರಾಮ ಅರತ್ತಿಲ್‌ನಲ್ಲಿ. ಬಡತನದ ಕಾರಣದಿಂದ ಬಾಲ್ಯದಲ್ಲಿಯೇ ಮಣಿಪಾಲಕ್ಕೆ ವಲಸೆ ಬಂದರು. ಮಲಯಾಳಂನಿಂದ ಕನ್ನಡಕ್ಕೆ 16 ಕಾದಂಬರಿ, 7 ಕಾವ್ಯ, 5 ಸಣ್ಣ ಕಥೆಗಳ ಸಂಗ್ರಹ ಅನುವಾದಿಸಿದ್ದಾರೆ. ಅವರು ’ಒಂದು ಆತ್ಮ ಕಥನ’ (ಕುಂಞಪ್ಪ) ಮಾತ್ರ ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಿಂದ ಮಲಯಾಳಕ್ಕೆ ಐದು ಕಾದಂಬರಿ ಅನುವಾದಿಸಿರುವ ಅವರು ತಗಳಿ ಶಿವಶಂಕರ ಪಿಳ್ಳೈ ಅವರ ಮಲಯಾಳ ಕೃತಿ ‘ಕಯರ್ ’ಅನ್ನು ’ಹಗ್ಗ’ ಎಂದು ಭಾಷಾಂತರಿಸಿದ್ದರು. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ ...
READ MORE