ಅಮೇರಿಕನ್ ಸಾಮ್ರಾಜ್ಯಶಾಹಿ ಯ ನೇತಾರರಾಗಿದ್ದ ಜಾರ್ಜ್ ಬುಶ್ ಜಗತ್ತಿನ ವಿರುದ್ದ ರಾಜೀ ಇಲ್ಲದ ಅವಿರತ ಸಮರ ಸಾರುವುದಾಗಿ ಘೋಷಣೆ ಸಾರಿದ್ದ. ಪ್ರಪಂಚದ ವಿವಿಧ ಭಾಗಗಳಲ್ಲಿ ಭಯೋತ್ಪಾದನೆಗೆ ನೀರು, ಗೊಬ್ಬರ ಹಾಕಿ ಬೆಳೆಸಿದ್ದೇ ಅಮೇರಿಕನ್ ನೇತೃತ್ವದ ಸಾಮ್ರಾಜ್ಯಶಾಹಿಗಳು. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ರಚಿಸಿದ ಕೃತಿಯೇ ’ಭಯೋತ್ಪಾದಕ’. ಇದರ ಲೇಖಕರಾದ ಮೊಹಸಿನ್ ಹಮೀದ್ ಏಳು ವರ್ಷಗಳ ಸತತ ಪ್ರಯತ್ನಗಳಿಂದ ರಚಿಸಿ ಹೊರತಂದ ಅದ್ಭುತ ಕೃತಿ ’ಭಯೋತ್ಪಾದಕ’.
ಇದನ್ನು ’Dramatic monologue’ ಎಂಬ ತಂತ್ರವನ್ನು ಬಳಸಿಕೊಂಡಿರುವ ’ಭಯೋತ್ಪಾದಕ’ ಕಾದಂಬರಿ ಕನ್ನಡ ಸಂವೇದನೆ ಮತ್ತು ಕಲಾತಂತ್ರಕ್ಕೆ ಹೊಸದನ್ನು ಪರಿಚಯಿಸುವ ಪ್ರಯತ್ಮ ಮಾಡಿದೆ. ಇದನ್ನು ಕನ್ನಡೀಕರಿಸಿದವರು ಅನುವಾದಕ ’ರಾಹು’ ಅವರು.
ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು . ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ...
READ MORE