ಚಿನುವ ಅಚಿಬೆ ಅವರ ‘ಎ ಮ್ಯಾನ್ ಆಫ್ ದಿ ಪೀಪಲ್’ ಕೃತಿಯ ಅನುವಾದ ಜನನಾಯಕ. ಒಡಿಲಿ ಎಂಬ ವಿದ್ಯಾವಂತ ಯುವಕ ಚೀಫ್ ನಂಗಾ ಅವರ ಹಿಂದಿನ ಸಂಘರ್ಷದ ಬಗ್ಗೆ ಹೇಳಿರುವ ನೈಜ ಕಥೆ ಇದಾಗಿದ್ದು 20 ನೇ ಶತಮಾನದ ಆಫ್ರಿಕನ್ ದೇಶದ ರಾಜಕೀಯದಲ್ಲಿ ಅವರ ಹೋರಾಟ ಅಪಾರ. ಇಲ್ಲಿ ಒಡಿಲಿ ಬದಲಾಗುತ್ತಿರುವ ಯುವ ಪೀಳಿಗೆಯನ್ನು ಪ್ರತಿನಿಧಿಸಿದರೆ ನಂಗಾ ಸಾಂಪ್ರದಾಯಿಕ ಪಶ್ಚಿಮ ಆಫ್ರಿಕಾದ ಪದ್ಧತಿಗಳ ಪ್ರತಿನಿಧಿಯಾಗಿ ಭಾಸವಾಗುತ್ತಾನೆ. ಈ ಕೃತಿಯು ಅಚೆಬೆ ಅವರ ಸ್ಥಳೀಯ ನೈಜೀರಿಯಾದಿಂದ ಪ್ರೇರಿತವಾಗಿದೆ. ಮಿಲಿಟರಿ ದಂಗೆಯೊಂದಿಗೆ ಕೊನೆಗೊಳ್ಳುವ ಈ ಕೃತಿಯನ್ನು ಅಚ್ಚುಕಟ್ಟಾಗಿ ಬಹಳ ಜತನದಿಂದ ಅನುವಾದಿಸಿದ್ದಾರೆ ವಿಕ್ರಂ ಚದುರಂಗ ಅವರು.
ವಿಕ್ರಂ ಚದುರಂಗ ಅವರು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಶೈಕ್ಷಣಿಕ ಡೀನ್ ಮತ್ತು ಹಿರಿಯ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಅಪಾರ ಪಾಂಡಿತ್ಯವಿದ್ದು, ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಮೂರು ಕೃತಿಗಳನ್ನು ಅನುವಾದಿಸಿದ್ದಾರೆ. 'ಆನ್ ಆಂಥಾಲಜಿ ಆಫ್ ಕನ್ನಡ ಶಾರ್ಟ್ ಸ್ಟೋರೀಸ್ ಇನ್ ಇಂಗ್ಲಿಷ್', 'ದಲಿತ ಎಕ್ಸ್ಪೀರಿಯೆನ್ಸ್: ಕನ್ನಡ ಶಾರ್ಟ್ ಸ್ಟೋರಿಸ್ ಇನ್ ಇಂಗ್ಲಿಷ್' ಮತ್ತು ‘ಫ್ರಾಮ್ ಮಾಸ್ತಿ ಟು ಮಹದೇವ. ಇಂಗ್ಲಿಷ್‌ನಲ್ಲಿ ‘ಆನ್ ಆಂಥಾಲಜಿ ಆಫ್ ಕನ್ನಡ’, ‘ಶಾರ್ಟ್ ಸ್ಟೋರಿಸ್ ಇನ್ ಇಂಗ್ಲಿಷ್ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಲೇಖನಗಳನ್ನು ಮಂಡಿಸಿದ್ದಾರೆ. ಚಿನುವ ಅಚಿಬೆ ...
READ MORE