ವಿಲಿಯಮ್ ಶೇಕ್ಸ್‌ಪಿಯರನಷ್ಟೆ ಪ್ರಸಿದ್ಧಿ ಪಡೆದ ಸರ್ವಾಂಟಿಸನ ಡಾನ್ ಕ್ವಿಕ್ಸಾಟ್ ಕಾದಂಬರಿಯ ಕಥಾನಾಯಕ ಮಧ್ಯ ವಯಸ್ಸು ದಾಟಿದ ಒಬ್ಬ ಸ್ಪ್ಯಾನಿಶ್ ಮಹಾಶಯ. ಇವನು ಮಧ್ಯಕಾಲೀನ ವೀರ ಸರದಾರರಸ ಕತೆಗಳನ್ನು ಓದಿ ಅದರಲ್ಲಿ ಬರುವ ರಕ್ಕಸರು, ಮಾಂತ್ರಿಕರು ಮುಂತಾದವರನ್ನು ನಿಜದಲ್ಲಿ ಕಾಣುವ ಭ್ರಮೆ ಹೊಂದಿದವನು. ಕಥಾನಾಯಕ ಸಾಂಕೋ ಪಾಂಚಾ ಎಂಬ ಹಳ್ಳಿಗನೊಬ್ಬನನ್ನು ತನ್ನ ಬಂಟನನ್ನಾಗಿ ಮಾಡಿಕೊಳ್ಳುತ್ತಾನೆ. ಕ್ವಿಕ್ಸಾಟನಿಗೆ ಸರದಾರತ್ವದ ಭ್ರಮೆಯಾದರೆ ಸಾಂಕೋಗೆ ಇದರಿಂದ ತನಗೇನಾದರು ದೊಡ್ಡ ಲಾಭ ಸಿಗುತ್ತದೆ ನಂಬಿಕೆಯಿಂದ ಬದುಕುತ್ತಿರುತ್ತಾನೆ. ಇಬ್ಬರೂ ಸಾಹಸಗಳನ್ನು ಹುಡುಕುತ್ತಾ ಹೊರಟು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ವಾಸ್ತವತೆ ಮತ್ತು ಭ್ರಮಾಧೀನತೆ, ಭೂತ ಮತ್ತು ವರ್ತಮಾನಗಳ ಮುಖಾಮುಖಿಗಳನ್ನು ಈ ಕಾದಂಬರಿಯಲ್ಲಿ ವಿವರಗಳನ್ನು ಒದಗಿಸಲಾಗಿದೆ.
©2024 Book Brahma Private Limited.