‘ಕಂಪನ ಮಾಪನಗಳೇ ವಂದನೆ’ ಮಲಯಾಳಂ ಸಾಹಿತಿ ಸಿ.ರಾಧಾಕೃಷ್ಣನ್ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ಕಾದಂಬರಿ. ಈ ಕೃತಿಯನ್ನು ನಾ. ದಾಮೋದರ ಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ನಿದ್ರಿಸುತ್ತಿರುವವರನ್ನು ಸಮಸ್ಯೆಯ ಕಡೆಗೆ ತುಡಿಯುವಂತೆ ಮಾಡಲು, ಎಚ್ಚರಗೊಳ್ಳುವಂತೆ ನೋಡಿಕೊಳ್ಳಲು ಸಾಹಿತಿಯಾದವನು ಸಕಲ ತಂತ್ರಗಳನ್ನೂ ಬಳಸುತ್ತಿರುತ್ತಾನೆ. ನಿಗೂಢವಾದ ಯುಗದ ಸಮಸ್ಯೆಯ ಕುರಿತು ನಮ್ಮನ್ನು ವೈಜ್ಞಾನಿಕವಾಗಿ ಅಸ್ವಸ್ಥರನ್ನಾಗಿಸಲೂ ಎಚ್ಚರಿಸಲೂ ಕಲಾತ್ಮಕವಾಗಿ ಸಂತೃಪ್ತರನ್ನಾಗಿಸಲೂ ಕಾದಂಬರಿಕಾರನಿಗೆ ಸಾಧ್ಯವಾಗುವುದು ಹೇಗೆ ಎಂಬುದನ್ನು ಸಿ.ರಾಧಾಕೃಷ್ಣನ್ ತಮ್ಮ ಕಾದಂಬರಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಅವರ ಕೃತಿಯನ್ನು ಅನುವಾದಕ ನಾ. ದಾಮೋದರ ಶೆಟ್ಟಿ ಅವರು ಅಷ್ಟೇ ಸೂಕ್ಷ್ಮ ಪ್ರಜ್ಞೆಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.