ಮರಾಠಿ ಲೇಖಕ ಆನಂದ ವಿಂಗಕರ ಅವರ ಕಾದಂಬರಿಯನ್ನು ಅನುವಾದಕ ಚಂದ್ರಕಾಂತ ಪೋಕಳೆ ಅವರು ‘ಅಕಾಲ ಮಳೆ ಸುರಿದಾಗಿನ ಕಥೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ನಗರ-ಹಳ್ಳಿಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಮಳೆಯನ್ನೇ ಅವಲಂಬಿಸಿರುವ ಸಣ್ಣ ಸಣ್ಣ ರೈತರ ಬದುಕು ಅಕ್ಷರಶಃ ಸ್ಥಗಿತಗೊಂಡಿದೆ. ಅವನ ಆಶೆ-ಆಕಾಂಕ್ಷೆಗಳೆಲ್ಲ ಇಂದಿಗೂ ಮಳೆಯನ್ನೂ, ಫಸಲನ್ನೂ ಅವಲಂಬಿಸಿದೆ. ಹೆಂಡತಿ ಮಕ್ಕಳ ಹೊಟ್ಟೆಗೆ, ಬಟ್ಟೆಗೆ, ಶಿಕ್ಷಣಕ್ಕೆ ನಾಲ್ಕು ದುಡ್ಡು ಉಳಿಯಲಿ ಎನ್ನುವುದೇ ಅವನ ಕನಸು. ಹವಾಮಾನ, ಋತುಮಾನ ಎಲ್ಲವೂ ಲಯ ತಪ್ಪಿದೆ. ಅದರ ಪರಿಣಾಮ ಕೃಷಿಯ ಮೇಲಾಗುತ್ತಿದೆ. ನಿಸರ್ಗದ ಪ್ರಹಾರದಿಂದ ರೈತ ಕಂಗಾಲಾಗುತ್ತಿದ್ದಾನೆ. ಮನೆ-ಹೊಲಕ್ಕಾಗಿ ಸಾಲ ಮಾಡಬೇಕಾಗುತ್ತದೆ. ಸಾಹುಕಾರರಿಂದ, ಸರಕಾರದಿಂದ ಪಡೆದ ಸಾಲವೇ ಉರುಳಾಗಿ ಹೊಲ ಕಳಕೊಳ್ಳುವ ಸ್ಥಿತಿ ಬಂದಿದೆ. ಒಂದು ರೈತ ಕುಟುಂಬದ ಮೇಲೆ ಬೀಳುವ ಆಘಾತಗಳು, ಕುಗ್ಗುವ ಆಯುಷ್ಯಗಳು ಚಿತ್ರಿಸಿದ್ದಾರೆ. ಆತ್ಮಹತ್ಯೆಯು ಕಾದಂಬರಿಯ ಕೇಂದ್ರಬಿಂದು. ಮಾನವೀಯತೆ, ಬದುಕಿನ ವಿವಿಧ ಮಗ್ಗಲುಗಳು ಸೂಚ್ಯವಾಗಿ ತೆರೆದುಕೊಳ್ಳುತ್ತವೆ. ಅನುವಾದವು ಉತ್ತಮವಾಗಿದೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE