ಮರಾಠಿ ಲೇಖಕಿ ಕವಿತಾ ಮಹಾಜನ್ ಅವರ ಕಾದಂಬರಿಯನ್ನು ಲೇಖಕಿ ಪ್ರೊ ವೀಣಾ ಶಾಂತೇಶ್ವರ ಅವರು ‘ಭಿನ್ನ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವೇಶ್ಯೆಯರ ಕರಾಳ ಬದುಕನ್ನು ದರ್ಶಿಸುವ ಈ ಕಾದಂಬರಿಯು ಪುರುಷ ಪ್ರಧಾನ ಸಮಾಜದ ಅಮಾನವೀಯ ಮುಖವನ್ನು ತೋರುತ್ತದೆ. ಹೆಣ್ಣು ತಾನು ವೇಶ್ಯೆಯಾಗಬೇಕೆಂದು ಹುಟ್ಟುವವಳಲ್ಲ. ಆದರೆ, ಸಮಾಜ ಅವಳನ್ನು ವೇಶ್ಯೆಯನ್ನಾಗಿಸುತ್ತದೆ. ಕೇವಲ ವೇಶ್ಯೆಯ ಹೆಣ್ಣು ಮಕ್ಕಳು ಮಾತ್ರ ವೇಶ್ಯೆಯರಾಗುವುದಿಲ್ಲ. ಶ್ರೀಮಂತ, ಕುಲೀನ ಎನ್ನುವ ಮನೆತನದಲ್ಲೂ ಎಳೆಯ ಹೆಣ್ಣು ಮಗುವಿನ ಮೇಲೂ ಅತ್ಯಾಚಾರ ನಡೆಯುತ್ತದೆ. ಆದರೆ, ಅವು ಬಯಲಿಗೆ ಬೀಳವು. ಹೆಣ್ಣನ್ನು ಭೋಗದ ವಸ್ತುವಾಗಿಸುವಲ್ಲಿ ಯಾವುದೇ ಸಮಾಜದ ನಡೆಯು ಹೊರತಲ್ಲ. ಆ ಸಮಾಜದಲ್ಲಿ ಕೆಲವು ವ್ಯಕ್ತಿಗಳು ಸುಸಂಸ್ಕೃತರು ಇದ್ದಿರಲೂ ಬಹುದು. ಇಂತಹ ಸಂಗತಿಗಳನ್ನು ಕಟ್ಟಿಕೊಡುವ ಕಥಾ ಹಂದರದ ಕಾದಂಬರಿ ಇದು.
ವೀಣಾ ಶಾಂತೇಶ್ವರ ಮೂಲತಃ ಬಾಗಲಕೋಟೆಯವರು. ಇವರು ಜನಿಸಿದ್ದು 22-02-1945ರಲ್ಲಿ. ಎಂ.ಎ., ಎಂ.ಲಿಟ್, ಪಿಎಚ್.ಡಿ. ಹಿಂದಿ ರಾಷ್ಟ್ರಭಾಷಾ ವಿಶಾರದ, ಫ್ರೆಂಚ್ ಸರ್ಟಿಫಿಕೇಟ್ ಕೋರ್ಸ್ ಮಾಡಿ ಕರ್ನಾಟಕ ಕಲಾ ಕಾಲೇಜು, ಧಾರವಾಡದಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಮುಳ್ಳುಗಳು, ಕೊನೆಯ ದಾರಿ, ಬಿಡುಗಡೆ (ಕಾದಂಬರಿ), ಶೋಷಣೆ, ಗಂಡಸರು ಕಾದಂಬರಿಗಳನ್ನು ರಚಿಸಿದ್ದಾರೆ. ಕುರಿಗಾಹಿ ಬಲ್ಲೇಶ್ವರ (ನಿರಾಳ ಅವರ ಹಿಂದಿ ಕಾದಂಬರಿ), ಅಷ್ಟ (ಅಮೆರಿಕನ್ ಕಥೆಗಳ ಅನುವಾದ) ಕೃತಿಗಳನ್ನು ಅನುವಾದ ಮಾಡಿದ್ದಾರೆ. ಸಂಚಿ ಹೊನ್ನಮ್ಮ (ವಿಮರ್ಶೆ) ಮಹಿಳೆಯರ ಸಣ್ಣ ಕತೆಗಳು (ಸಂಪಾದಿತ), ಕನ್ನಡದ ಸಣ್ಣಕಥಾ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ (ವಿಮರ್ಶೆ), ಅಭಿವ್ಯಕ್ತಿ (ಸ್ತ್ರೀವಾದಿ ಸಾಹಿತ್ಯದ ಬಗ್ಗೆ ವಿವಿಧ ...
READ MORE