ಮಕ್ಕಳು ಮನೆಯ ನಂತರ ಹೆಚ್ಚಿನ ಸಮಯ ಕಳೆಯುವುದು ಶಾಲೆಯಲ್ಲಿ, ಅದಕ್ಕೆ ಪೂರಕ ವಾತಾವರಣ ಇದ್ದರಂತೂ ಮುಗಿಯಿತು,ಖುಷಿಯಾಗಿ,ಲವಲವಿಕೆ ಯಿಂದ,ಎಲ್ಲರೊಡನೆ ಬೆರೆಯುತ್ತಾರೆ,ಸ್ವಲ್ಪ ಪ್ರೀತಿ ತೋರುವ ಟೀಚರ್ ಸಿಕ್ಕಿದರೆ ಅವರಿಗೇ ಅಂಟಿಕೊಂಡುಬಿಡುತ್ತಾರೆ. ಹಾಗೆಯೇ ಇಲ್ಲಿ ಭಾನುಮತಿ ಮತ್ತು ಕುಸುಮ ಟೀಚರ್ ಮಧ್ಯೆ ಒಂದು ಭಾವನಾತ್ಮಕ ಸೆಳೆತ ಇದೆ.ಸುಂದರ ಮುಖದ,ಅರಳುಗಣ್ಣುಗಳ,ಭಾನುಮತಿ ಯನ್ನು ಕಂಡರೆ ಎಲ್ಲರಿಗೂ ಇಷ್ಟವೇ, ಕುಸುಮ ಟೀಚರ್ ಗೆ ಇವಳನ್ನು ಕಂಡರೆ ಹೆಚ್ಚಿನ ಪ್ರೀತಿ, ಮಮತೆ,ಅನುಬಂಧ. ಚಿಕ್ಕವಯಸಿನಲ್ಲಿಯೇ ಗಂಡನಿಂದ ದೂರವಾಗಿದ್ದ ವೆಂಕಟಲಕ್ಷ್ಮಮ್ಮ, ದೃತಿಗೆಡದೆ,ಕಷ್ಟಪಟ್ಟು ಓದಿ ಟಿ.ಸಿ.ಎಚ್.ಮುಗಿಸಿ,ಕೆಲಸಕ್ಕೆ ಸೇರಿ,ನಂತರ ಕೆಲವರ ಸಹಾಯದಿಂದ ಒಂದು ಕನ್ನಡಶಾಲೆಯನ್ನು ತೆರೆದು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುತ್ತಾರೆ.ಗಿರೀಶ್ ಅವರ ತಮ್ಮ,ಅಕ್ಕನ ಸಹಾಯದಿಂದ ಓದಿ ರೈಲ್ವೆ ಇಲಾಖೆಯಲ್ಲಿ ಎಂಜಿನಿಯರ್ ಆಗಿರುತ್ತಾನೆ . ಬಿ.ಎಲ್. ಮುಗಿಸಿ, ಭಾನುಮತಿಯ ತಂದೆಯ ಜೊತೆ ಅಸ್ಸಿಸ್ಟೆಂಟ್ ಹಾಗಿ ಸೇರಿಕೊಂಡ ಕಮಲೇಶ್ ಭಾನುಮತಿ ಯ ಚೆಲುವಿಗೆ ಸೋತು ಮದುವೆಯಾಗುವುದಾಗಿ ಅವಳ ತಂದೆಯ ಬಳಿ ಹೇಳಿದಾಗ,ಸಹಜವಾಗಿಯೇ ಸಂತೋಷದಿಂದ ಒಪ್ಪಿಗೆ ಸೂಚಿಸುತ್ತಾರೆ. ಕಾಗದದ ಮೂಲಕ ಕುಸುಮ, ಗಿರೀಶ್ ರಿಗೆ ವಿಷಯ ತಿಳಿದು ಸಂತೋಷ ಪಡುತ್ತಾರೆ. ಚಲಿಸುವ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದ ಭಾನುಮತಿಯನ್ನು ಕಾಪಾಡಿದ ಸುದರ್ಶನ್ ಯಾರು?ಅವಳ ಈ ಪ್ರಯತ್ನ ಕ್ಕೆ ಕಾರಣ?ಅವಳ ಮತ್ತು ಕುಸುಮಳ ಕೊಂಡಿ ಕಳಚಿದ್ದು ಹೇಗೆ? ಎಂಬೂದು ಈ ಕಾದಂಬರಿಯಲ್ಲಿ ಅಡಗಿಕೊಂಡಿರುವ ಕುತೂಹಲ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE