ಮೋಪ್ಲಾ ಕಾಂಡ ಕಾದಂಬರಿಯನ್ನು ರಚಿಸಿದವರು ವಿನಾಯಕ ದಾಮೋದರ್ ಸಾವರ್ಕಾರ್. ಈ ಕಾದಂಬರಿಯನ್ನು ಕನ್ನಡಕ್ಕೆ ಗಿರಿಜಾ ಶಾಸ್ತ್ರಿ ಅವರು ಅನುವಾದಿಸಿದ್ದಾರೆ. ದಕ್ಷಿಣ ಭಾರತದ ಕೇರಳ ಪ್ರಾಂತದಲ್ಲಿ (ಹಿಂದೆ ’ಮಲಬಾರ್) 1920ರ ದಶಕದಲ್ಲಿ ಮೋಪ್ಲಾ(ಮಾಪ್ಪಿಳ್ಳೆ)ಗಳು ನಡೆಸಿದ ದೌರ್ಜನ್ಯಸರಣಿಯನ್ನು ವಸ್ತುವಾಗಿರಿಸಿಕೊಂಡು ವಿನಾಯಕ ದಾಮೋದರ ಸಾವರಕರ್ ಅವರು 1926ರಲ್ಲಿ ಕಾದಂಬರಿಯ ರೂಪದಲ್ಲಿ ಬರೆದ ಕೃತಿ, ’ಮೋಪ್ಲಾ ಕಾಂಡ’ (ಮರಾಠಿ ಮೂಲದ ಹೆಸರು – ’ಮಲಾ ಕಾಯ್ ತ್ಯಾಚೇ).. ಗಾಂಧಿಯವರು ಕೈಗೊಂಡ ಖಿಲಾಫತ್ ಆಂದೋಲನದ ಹಿಂದುಗಡೆ ಗರಿಗೆದರಿದ ಬಂಡಾಯದ ಪರಿಣಾಮವಾಗಿ ಸ್ವಾತಂತ್ರ್ಯಪರ ರಾಷ್ಟ್ರೀಯಾಂದೋಲನ ಮಾರ್ಗಚ್ಯುತವಾಯಿತು. ಅಗಾಧ ಪ್ರಮಾಣದ ನರಹತ್ಯೆ ಮತ್ತು ಇಸ್ಲಾಮಿಗೆ ಮತಾಂತರ, ಲೂಟಿ-ಹಿಂಸಾಚರಣೆ, ಜೀವಹಾನಿ-ಆಸ್ತಿಹಾನಿಗಳು ಆದವು. ಆಂಗ್ಲಪ್ರಭುತ್ವದ ಸೇನೆಯು ದೃಢ ಪ್ರಯತ್ನದಿಂದ ಬಂಡಾಯವನ್ನು ಅಡಗಿಸಬೇಕಾಯಿತು. ಆ ಘಟನಾವಳಿಯ ಪರಿಣಾಮಪರಂಪರೆ ಎಂಟು ದಶಕಗಳ ತರುವಾಯವೂ ಜೀವಂತವಿದೆ. ಈ ಕಾರಣದಿಂದ ’ಮೋಪ್ಲಾ ಕಾಂಡ’ದ ಯಥಾರ್ಥ ಚಿತ್ರಣವನ್ನು ಇಂದಿನ ಪೀಳಿಗೆಯ ಮುಂದಿರಿಸುವ ಉದ್ದೇಶದಿಂದ ಈ ಕನ್ನಡಾನುವಾದ ಹೊರತರಲಾಗಿದೆ ಎಂದು ಈ ಕಾದಂಬರಿಯ ಕುರಿತಾಗಿ ಹೇಳಲಾಗಿದೆ.
©2024 Book Brahma Private Limited.