ತೆಲುಗಿನ ಖ್ಯಾತ ಕಾದಂಬರಿಕಾರ ಸಲೀಂ ಬರೆದ ’ಜೀವನ್ಮೃತರ್’ ಕಾದಂಬರಿಯ ಕನ್ನಡ ರೂಪ ಇದು. ಹರ್‌ಜ್ಯೋತ್ ಎಂಬ ಮೂರು ವರ್ಷದ ಮಗುವಿನ ಸಂಕಟಗಳನ್ನು ಕೃತಿ ಚಿತ್ರಿಸುತ್ತಾ ಹೋಗುತ್ತದೆ. ಆಂಧ್ರಪ್ರದೇಶದ ಆಸ್ಪತ್ರೆಯೊಂದು ಮಗುವಿನ ಅಮಾನವೀಯವಾಗಿ ವರ್ತಿಸುವುದು ಮುಖ್ಯ ಕಥಾವಸ್ತು. ವ್ಯಾಪಾರೀಕರಣಗೊಳ್ಳುತ್ತಿರುವ ವೈದ್ಯಕೀಯ ಜಗತ್ತು, ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಕೃತಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ.
ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ನಾಗರಾಜಪ್ಪ ಹಾಗೂ ರಾಮಚಂದ್ರಮ್ಮ ದಂಪತಿಯ ಮಗನಾಗಿ 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ಜನಿಸಿದರು. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 15 ವರ್ಷಗಳಿಂದ ಏರ್ ಮೆನ್ ಆಗಿ ವೈದ್ಯಕೀಯ ಸಹಾಯಕನ ವೃತ್ತಿ. ಕಳೆದ 15 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ), ಕಾಡುವ ಕಥೆಗಳು (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ತಣ್ಣೀರ ...
READ MOREಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ