‘ಬಾಲ್ಯಕಾಲ ಮಾಯಾಜಾಲ’ ಎಂಬುದು ಆಂಗ್ಲ ಬರಹಗಾರ್ತಿ ಸಾವಿತ್ರಿ ಬಾಬುಲ್ಕರ್ ಅವರು ಬರೆದ ಕಾದಂಬರಿಯನ್ನು ಲೇಖಕಿ ಶ್ಯಾಮಲಾ ಮಾಧವ ಅವರು ಬಾಲ್ಯಕಾಲ ಮಾಯಾಜಾಲ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳ ಮೂಲಕ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.ನನ್ನವರಿವರು, ಕಲಿಯಲಿದೆ ಅದೆಷ್ಟೋ, ನನ್ನ ಮುತ್ತಜ್ಜ. ನನ್ನ ಭಾಸ್ಕರ್ ಪಪ್ಪಾ ಪಪ್ಪಾ ಬಗ್ಗೆ ಇನ್ನಷ್ಟು, ನನ್ನ ಒಬ್ಬನೇ ಒಬ್ಬ ಅಣ್ಣ, ಇನ್ನೊಬ್ಬ ಸೋದರ, ತಾಯನ್ನರಸಿ, ಮತ್ಸರದ ಎಳೆ, ಶಿರಿಯಾದಲ್ಲಿನ ದಿನಗಳು, ಸುಂದರ ತರುಣ, ದೇವಳದ ಕಥೆ, ನಾದಸ್ವರದ ಮಾಂತ್ರಿಕತೆ, ಬಂಧುಬಳಗ ನೆರೆತುಂಬಿ, ಮತ್ತಷ್ಟು ತೆರೆದುಕೊಂಡಾಗ, ಮಾಡಿನ ಮೇಲೆ ಸುರಿವ ಮಳೆ ,ಸೆಪ್ಟೆಂಬರ್ ಬಂದಾಗ ನಮ್ಮಜ್ಜಿಯ ನಿಯಮಗಳು, ಆಜ್ ಪಪ್ಪಾನ ಮನೆಮದ್ದ ,. ಆಜ್ ಪಪ್ಪಾ ಬಗ್ಗೆ ಇನ್ನಷ್ಟು, ಕಡಲತಡಿಯ ಮನೆ, ಅನಂತ ಸದನದಲ್ಲಿ ಕೊಡಿಯಾಲ ವಂಶ, ನನ್ನ ತಂದೆಯ ಕುಟುಂಬ, ಮತ್ತಷ್ಟು ಬಂಧುಗಳು, ಅರ್ಧ ಬರೆದ ಚಿತ್ರ, ಮಂಗಳೂರಿನಲ್ಲಿ ಮೋಜು ,ಸಾವಿನ ಅಂಚಿನಲ್ಲಿ, ಸೋದರರೂ ಇನ್ನಿತರರೂ ಹೀಗೆ ಒಟ್ಟು 36 ಕತೆಗಳನ್ನು ಹೊಂದಿದೆ.
ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಮಂಗಳೂರಲ್ಲಿ ಜನಿಸಿದವರು, ಬೆಸೆಂಟ್ ಶಾಲೆ ಹಾಗೂ ಸೇಂಟ್ ಆಗ್ನಿಸ್ ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ತಂದೆ ನಾರಾಯಣ ಉಚ್ಚಿಲ್ ಹಾಗೂ ತಾಯಿ ಯು. ವಸಂತಿ, ಮಂಗಳೂರ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಹೆಸರು. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, “ಕಡಲಿನ ಕರೆ' ಕವನ, 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಿತ. 'ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಎರಡು ವರ್ಷಗಳ ಕಾರ್ಯಭಾರದಲ್ಲಿ ಕೃತಿ ...
READ MORE