ವಿವಾಹೇತರ ಸಂಬಂಧ ಎಂಬ ಅತಿಸೂಕ್ಷ್ಮ ವಿಷಯವನ್ನಿಟ್ಟುಕೊಂಡು ರಚಿಸಿರುವ ಕಾದಂಬರಿ ‘ಅನೈತಿಕ’. ಆದರೆ ಈ ಸಮಾಜದಲ್ಲಿ ಅನೈತಿಕತೆ ಎಂಬುದು ಯಾವ ಲಿಂಗಕ್ಕೆ ಎಷ್ಟು ಅನುಪಾತದಲ್ಲಿ ಅನ್ವಯಿಸುತ್ತದೆ ಎಂಬುದರ ಕುರಿತು ಧ್ವನಿ ಎತ್ತಿದ್ದಾರೆ ಲೇಖಕರು. ಕೊಂಚ ಆಯತಪ್ಪಿದರೂ ಓದುಗರನ್ನು ತೀರಾ ಮುಜುಗರಕ್ಕೊಳಪಡಿಸುವ ಇಂತಹ ಕತಾಹಂದರದಲ್ಲಿ ಕಾದಂಬರಿ ರಚಿಸಿರುವುದು ಒಂದು ಪ್ರಯೋಗ ಎನ್ನಬಹುದು. ರಾಜಾ ಚೆಂಡೂರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE