ಇದು ಸಾಯಿಸುತೆಯವರ ನಿನಾದ ಕಾದಂಬರಿಯ ಮುಂದುವರಿದ ಭಾಗ,ಸಿರಿತನಕ್ಕೆ ಒತ್ತು ಕೊಡುವ, ಬ್ಯುಸಿನೆಸ್ ವೃಧಿಸಬೇಕೆಂಬ ಆಕಾಂಕ್ಷೆ ಹೊತ್ತ ಭಾಗವತ್ ಕುಟುಂಬ, ಬ್ಯುಸಿನೆಸ್ ಅಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಶ್ರೇಯಾ ಗ್ರೂಪ್ ಒಡತಿ ಶ್ರೇಯಾ ಜೊತೆಗೆ ಅಮಿತ್ ವಿವಾಹ ಮಾಡಬೇಕೆಂಬ ಆಸೆ ಇಟ್ಟಿರುತ್ತಾರೆ.ಆದರೆ ಅಮಿತ್ ಇದ್ಯಾವುದನ್ನ ಗಣನೆಗೆ ತೆಗೆದುಕೊಳ್ಳದೆ, ಹೃದಯದ ಮಾತಿಗೆ ಬೆಲೆ ಕೊಟ್ಟು ತಾನು ತುಂಬಾನೆ ಇಷ್ಟಪಟ್ಟು ಮನಃಪೂರ್ವಕವಾಗಿ ಪ್ರೀತಿಸಿದ ದೀಪಿಕಾಳ ಜೊತೆಗೆ ಮದುವೆಯಾಗುತ್ತಾನೆ.ಅವರ ಸುಖ ದಾಂಪತ್ಯದ ಕೂಸು ಆದಿತ್ಯ ಹುಟ್ಟುತ್ತಾನೆ.. ಆದರೆ ಆ ಸಮಯದಲ್ಲಿ ಭಾಗವತ್ ಗ್ರೂಪ್ ವ್ಯವಹಾರದಲ್ಲಿ ಪಾತಾಳಕ್ಕಿಳಿದಿರುತ್ತದೆ. ಭಾಗವತ್ ಉಳಿಸಲು ಎಲ್ಲಾರು ಕಷ್ಟ ಪಡುತ್ತಿರುವಾಗಲೇ ಶ್ರೇಯಾಳ ಸಹಾಯ ಬಯಸುವ ಕುಟುಂಬ, ಅಮಿತ್ ಒಂದು ಮಗುವಿನ ತಂದೆಯಾದರೂ, ಅಮಿತನ ಹುಚ್ಚು ಹುಚ್ಚಾಗಿ ಪ್ರೀತಿಸುವ ಶ್ರೇಯಾ ಇಡುವ ಒಂದು ತಾಕಿತಿಗೆ ಭಾಗವತ್ ಕುಟುಂಬವೇ ತಲ್ಲಣಿಸಿ ಹೋಗುತ್ತೆ.ಆದರೆ ಧೃತಿಗೆಡದ ದೀಪಿಕಾ ಶ್ರೇಯಾಳ ಪರಿಹಾರ ಒಪ್ಪಿಕೊಳ್ಳೋದೇ ಸೂಕ್ತ, ಇಲ್ಲದಿದ್ದರೆ ಇಡೀ ಭಾಗವತ್ ಕುಟುಂಬದ ಜೊತೆಗೆ, ಅದರಲ್ಲಿ ಉದ್ಯೋಗ ಮಾಡುವ ಸಾವಿರಾರು ಕುಟುಂಬಗಳು ಬೀದಿಗೆ ಬೀಳುತ್ತೆ ಎಂದು ಎಲ್ಲರನ್ನು ಕಷ್ಟ ಪಟ್ಟು ಒಪ್ಪಿಸುತ್ತಾಳೆ.. ಪ್ರೀತಿಸಿ ಮದುವೆಯಾದ ಅಮಿತ್ ನ ಶ್ರೇಯಾಗೆ ಬಿಟ್ಟು ಕೊಡಲು ಒಪ್ಪಿದ ಅವಳು, ತನ್ನ ಮಗ ಆದಿತ್ಯ ಮಾತ್ರ ಭಾಗವತ್ ಕುಟುಂಬದ ಕೂಸಾಗಿರಬೇಕೆಂಬ ಇಚ್ಛೆ ಹೊಂದಿ, ಇಬ್ಬರು ದೂರ ದೂರವಾಗುತ್ತಾರೆ. ಆದರೆ ಅಮಿತ್ ನಲ್ಲಿ ಇರೋದು ದೀಪಿಕಾಳೇ. ಇದನ್ನರಿತ ಶ್ರೇಯಾ, ಮುಂದೆ ಅವಳು ತಗೊಳ್ಳೋ ನಿರ್ಧಾರ ತುಂಬಾನೇ ಖುಷಿಯಾಗುತ್ತೆ.ಅದನ್ನ ನಿಲ್ಲಿಸದಿರು ಕೊಳಲಗಾನವ ಕಾದಂಬರಿಯಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ ನಮ್ಮ ಸಾಯಿಸುತೆ ಮೇಡಂ.ಈ ಕಥೆಯಲ್ಲಿ ಬರುವ ಹೆಣ್ಣು ಮಕ್ಕಳಾದ ದೀಪಿಕಾ, ಶ್ರೇಯಾ, ರಾಧಾ ಹೀರೇಗೌಡರು ಪಾತ್ರಗಳು ತುಂಬಾ ಚೆನ್ನಾಗಿವೆ.ಹಾಗೆಯೇ ಅಮಿತ್, ದೀಪಿಕಾಳ ತಂದೆ ದಿಜೇಂದ್ರ ಬೋಸ್, ಪ್ರೊಫೆಸರ್ ಹೀರೇಗೌಡರು, ಪ್ರಮೋದ್ ಭಾಗವತ್ ಪಾತ್ರಗಳು ಕೂಡ ಚೆನ್ನಾಗಿವೆ.ದೀಪಿಕಾಳ ಸರಳತನ, ಎಲ್ಲ ಸಂಬಂಧಗಳನ್ನು ಪ್ರೀತಿಸುವ,ಕುಟುಂಬದ ಉಳಿವಿಗಾಗಿ ಅವಳು ತಗೊಳ್ಳೋ ನಿರ್ಧಾರ,ಅವಳ ದಿಟ್ಟತನ ಎಲ್ಲವೂ ಇಷ್ಟವಾಗುತ್ತೆ.ಅದರಂತೆಯೇ ಶ್ರೇಯಾಳ ಬುದ್ಧಿವಂತಿಕೆ,ಬುಸಿನೆಸ್ ಅಲ್ಲಿ ಮುಂದುವರಿದ ಛಲ ಕೂಡ ಚೆನ್ನಾಗಿದೆ.
©2024 Book Brahma Private Limited.