ಸುತ್ತಿಬಳಸಿ ಹೇಳದೇ ನೇರವಾಗಿ ಹೇಳಬೇಕಾದ್ದನ್ನು ನೇರವಾಗಿ ಹೇಳಿಬಿಡುವುದೆ ಕವಿತೆಯ ವಿಶೇಷತೆ. ಸುಲಭವಾಗಿ ಓದಿ ಮುಗಿಯಿತು ಅನ್ನುವಾಗಲೇ ಒಳಾರ್ಥಗಳು ಬಿಚ್ಚಿಕೊಂಡು ಮನಸ್ಸು ಮೌನದ ಮೊರೆ ಹೋಗುತ್ತದೆ. ಸಮಾಜದ ತಲ್ಲಣ, ಪಲ್ಲಟಗಳು, ಮನುಷ್ಯನ ವಿಕೃತಿ, ಕ್ರೌರ್ಯ ಮತ್ತು ಸಣ್ಣತನಗಳನ್ನು ನಾನಾ ರೂಪಕಗಳ ಮೂಲಕ ಕೇರಳದ ಡಾ.ಸಂತೋಷ ಅಲೆಕ್ಸ್ ಹಿಡಿದಿಡಲು ಯತ್ನಿಸಿದ್ದಾರೆ. ಅತ್ಯಾಚಾರ ಮತ್ತು ಆ ಸುತ್ತ ನಡೆಯುವ ತನಿಖೆಯನ್ನು ಕವಿತೆಯಾಗಿಸಿರುವ ಅಲೆಕ್ಸ್, 'ನೆನ್ನೆ ತಾನೆ ಒಂದು ಹುಡುಗಿಯ ಮೇಲೆ ಅತ್ಯಾಚಾರವಾಗಿತ್ತು ಆಕೆ ಸಂಜೆಯ ವೇಳೆ ವಯಲಿನ್ ನುಡಿಸುತ್ತಿದ್ದಳು ತನ್ನ ಪರವಾಗಿ ಆಕೆಗೆ ಹೇಳಲೇನೂ ಉಳಿದಿರಲಿಲ್ಲ ಅನ್ನುತ್ತಾರೆ. ವಯಲಿನ್ ನುಡಿಸುವ ರೂಪಕವೇ ಹುಡುಗಿಯ ಗೋಳು, ಅಸಹಾಯಕತೆ ಮತ್ತು ಸಮಾಜದ ನಿರ್ಲಕ್ಷ್ಯವನ್ನು ಬಿಂಬಿಸುತ್ತದೆ.ಸಮಾಜದಲ್ಲಿ ಸಂಭವಿಸುವ ಆಹಿತಕರ ಘಟನೆಗಳನ್ನು ತನ್ನ ಕವಿತೆಯ ಮೂಲಕ ಎಚ್ಚರಿಸಿದ್ದಾರೆ.
©2024 Book Brahma Private Limited.