ತಮಿಳಿನ ಲೇಖಕಿ ರಾಜಮ್ ಕೃಷ್ಣನ್ ಅವರ ಕೃತಿಯ ಕನ್ನಡ ಅನುವಾದ ʻಕುರುಂಜಿ ಜೇನುʼ. ಡಾ. ಅಶೋಕ್ ಕುಮಾರ್ ಕನ್ನಡಕ್ಕೆ ತಂದಿರುವ ಈ ಪುಸ್ತಕದಲ್ಲಿ ನೀಲಗಿರಿ ಬೆಟ್ಟ ಪ್ರದೇಶದಲ್ಲಿ ವಾಸಿಸುವ ಬಡಗ ಗಿರಿಜನರು, ಅವರ ಅರವತ್ತು ವರ್ಷಗಳ ಇತಿಹಾಸ, ಹಾಗೂ ಅವರ ಸಾಂಸ್ಕೃತಿಕ ಪರಿವರ್ತನೆಗಳನ್ನು ಆಳವಾಗಿ, ಸ್ಪಷ್ಟವಾಗಿ ಚಿತ್ರೀಕರಿಸಲಾಗಿದೆ. ಹೀಗೆ ಈ ವಿಷಯದಲ್ಲಿ ಬಂದ ಮೊದಲ ಕಾದಂಬರಿ ಎಂಬ ಹೆಸರೂ ʻಕುರುಂಜಿ ಜೇನುʼ ಕೃತಿಗಿದೆ.
ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್ ಕುಮಾರ್ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE