ಮಾಟಗಾತಿ

Author : ರವಿ ಬೆಳಗೆರೆ

Pages 370

₹ 210.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಅತೀಂದ್ರೀಯ ಶಕ್ತಿಗಳ ಕುರಿತಾಗಿ ಬರೆಯಲ್ಪಟ್ಟಂತಹ ಕಾಲ್ಪನಿಕ ಕಾದಂಬರಿಯಿದು. ತನ್ನ ಹಠ ಸಾಧಿಸಲು ಹೊರಟಂತಹ ಓರ್ವ ಮಾಟಗಾತಿಯ ಸುತ್ತ ಈ ಪುಸ್ತಕದ ಕಥೆ ಸುತ್ತುತ್ತದೆ. ತಾನು ಕಲಿತ ವಿದ್ಯೆಯಿಂದ ಏನನ್ನು ಬೇಕಾದರೂ ಸಾಧಿಸಬಲ್ಲೆ ಎಂದು ಹೊರಟ ಮಾಟಗಾತಿಯ ಹಮ್ಮನ್ನು ಮುರಿಯುವ ಕಥೆ ಬಹಳ ರೋಚಕವಾಗಿ ನಿರೂಪಿಸಿದ್ದಾರೆ ಲೇಖಕರಾದ ರವಿ ಬೆಳಗೆರೆಯವರು. ಎಲ್ಲಿ ಸತ್ಯ ಇರುತ್ತೋ ಅಲ್ಲಿ ಸುಳ್ಳು ಇರುತ್ತೆ, ಎಲ್ಲಿ ದೇವರು ಇರುತ್ತಾನೋ ಅಲ್ಲಿ ಪ್ರೇತಾತ್ಮಗಳೂ ಇರುತ್ತವೆ. ಒಳಿತು ಮತ್ತು ಕೆಡುಕುಗಳ ನಡುವೆ ನಡೆಯುವಂತಹ ಯುದ್ಧವೇ ಮಾಟಗಾತಿ ಪುಸ್ತಕದ ಕಥಾವಸ್ತು. ತೇಜಮ್ಮ ಅನ್ನೋ ಪಾತ್ರವನ್ನು ಮಾಟಗಾತಿಯ ರೂಪಿದಲ್ಲಿ ನಿರೂಪಿಸಿ ಅಗ್ನಿನಾಥ ಎಂಬ ಅಘೋರಿಯನ್ನು ಅವಳ ವಿರುದ್ಧ ಯುದ್ಧಕ್ಕೆ ನಿಲ್ಲಿಸಿದ ಕಥಾ ಪ್ರಸಂಗ ಮತ್ತಷ್ಟು ರೋಚಕತೆಯನ್ನು ಸೃಷ್ಟಿಸುತ್ತದೆ. ಅತೀಂದ್ರೀಯ ಶಕ್ತಿಗಳನ್ನು ತನ್ನ ಕೈ ವಶ ಮಾಡಿಕೊಳ್ಳಲು ತೇಜಮ್ಮ ನಡೆಸುವ ಹುನ್ನಾರ, ಅವಳ ಹಠಕ್ಕೆ ಬಲಿಯಾಗುವ ಅಮಾಯಕ ಜನರು ಹೀಗೆ ಎಲ್ಲಾ ಅಂಶಗಳು ತೇಜಮ್ಮ ಪಾತ್ರಕ್ಕೆ ಜೀವ ತುಂಬುತ್ತವೆ. ಈ ಪುಸ್ತಕದ ಮುಂದುವರಿದ ಭಾಗವಾಗಿ ಸರ್ಪ ಸಂಬಂಧ ಬರೆಯಲ್ಪಟ್ಟಿದ್ದು ಇಲ್ಲಿ ಕೂಡ ಮಾಟಗಾತಿ ಪುಸ್ತಕದ ಕಥೆಯನ್ನು ಮುಂದುವರೆಸಲಾಗಿದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books