ತೇರೂವೋ

Author : ಚಂದ್ರಕಾಂತ ಪೋಕಳೆ

₹ 80.00




Year of Publication: 2015
Published by: ದೇಸೀ ಪುಸ್ತಕ ಪ್ರಕಾಶನ

Synopsys

1970ರಲ್ಲಿ ಬರವಣಿಗೆ ಆರಂಭಿಸಿರುವ ಗೌರಿ ದೇಶಪಾಂಡೆಯವರು ಪ್ರಮುಖ ಮರಾಠಿ ಬರಹಗಾರ್ತಿ .ಹೆಣ್ಣಿನ ಜೀವನದ ಹಲವು ಮಜಲುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ದಿಟ್ಟವಾಗಿ ವಿವರಿಸುವ ಸಾಂಪ್ರದಾಯಿಕ ರೀತಿಯಲ್ಲದೆ ಸಾಮಾಜಿಕ ಮಾನಸಿಕ ಸಾಂಸ್ಕ್ರತಿಕ ಹಾಗೂ ತಾತ್ವಿಕ ಪಾತಳಿಗಳಲ್ಲಿ ಅನಾವರಣಗೊಳಿಸುವ ಪ್ರಾಮಾಣಿಕ ಹಾಗೂ ಕ್ರಾಂತಿಕಾರಕ ಹೆಜ್ಜೆ ಅವರದು. ಈ ಕೃತಿಯನ್ನು ಕನ್ನಡಕ್ಕೆ ತಂದಿರುವ ಶ್ರೀ ಚಂದ್ರಕಾಂತ ಪೋಕಳೆ ಅವರು "ತೇರೂವೋ" ಜಪಾನಿ ಭಾಷೆಯಲ್ಲಿ ಉದಯಿಸುವ ಸೂರ್ಯ ಎಂಬ ಅರ್ಥದ ಈ ಕಿರು ಕಾದಂಬರಿ ನಲವತ್ತೈದರ ಆಸು ಪಾಸಿನ ಮಹಿಳೆಯೊಬ್ಬಳ ಅಂತರಂಗವನ್ನು ಬಿಚ್ಚಿಡುತ್ತಾ ಹೋಗುತ್ತದೆ. ಅನುವಾದಕರ ಮಾತಿನಲ್ಲಿ ಹೇಳುವುದಾದರೆ" ಗೌರಿ ದೇಶಪಾಂಡೆ ಚಿತ್ರಿಸಿದ ಮಹಿಳೆ ಜೀವನಮೌಲ್ಯ ಅನುಸರಿಸಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಾಳೆ. ಮದುವೆಯಾಗಲಿ ಬಿಡಲಿ, ಅದು ಅವಳ ಪ್ರತಿಷ್ಠೆಯ ಮೇಲೆ ಯಾವ ಪ್ರಭಾವ ಬೀರುವುದಿಲ್ಲ ಉಳಿದವರು ತನ್ನನ್ನು ವ್ಯಕ್ತಿ ಎಂದು ಪರಿಗಣಿಸಬೇಕು ಎನ್ನುವುದು ಅವಳ ಆಗ್ರಹ" .( ಇಲ್ಲಿ ನಮ್ಮ ಮನುಸ್ಮೃತಿಯ"ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಇಂತಹವರ ಮಗಳು ಹೆಂಡತಿ ತಾಯಿ ಎಂದೇ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ನೆನಪಿಸಿಕೊಳ್ಳಬಹುದು). ಇಂತಹ ಸ್ವತಂತ್ರ ಮನೋಭಾವದ ಕಥಾನಾಯಕಿ ತನ್ನ ಪತಿಯ ಉದ್ಯೋಗದ ಸಲುವಾಗಿ ವರ್ಷಗಟ್ಟಲೆ ವಿದೇಶಗಳ ವಾಸ ಮಾಡುವಾಗಲೆಲ್ಲ ಅವನೊಂದಿಗೆ ಹೋಗುವ, ವಿಭಿನ್ನ ಅನುಭವಗಳಿಗೆ ತೆರೆದುಕೊಳ್ಳುವ ದಿಟ್ಟ ಹೆಣ್ಣು. ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ ಎಂದರೆ ವಯಸ್ಸಾಯಿತು ಎಂದರ್ಥ ಅವಳ ದೃಷ್ಟಿಯಲ್ಲಿ 1ವರ್ಷ 3 ತಿಂಗಳ ಅವಧಿಯ ಅವಳ ಜಪಾನ್ ವಾಸದ ಅನುಭವದ ಕಥನದ ಜೊತೆ ಜೊತೆಗೆ ಸಾಗುವ ಅವಳ ಅಂತರಾಳದ ಧ್ವನಿಗಳು ಹಾಗೂ ಅಲ್ಲಿನ ಅವಳ "ಪ್ರೇಮ ಪ್ರಸಂಗ"ದ ಅಧ್ಯಾಯದ ರೋಚಕತೆಯೇ ಕಾದಂಬರಿಯ ಕಥಾವಸ್ತು . ತನ್ನ ತಂದೆಯ ಸ್ನೇಹಿತರು ಹಾಗೂ ತನಗೂ ತುಂಬಾ ಆತ್ಮೀಯರಾದ "ಜಿ" ಅವರಿಗೆ ನಿಯಮಿತವಾಗಿ ಪತ್ರ ಬರೆಯುತ್ತಾ ಜಪಾನ್ ದೇಶದ ವೈಶಿಷ್ಟ್ಯತೆಯನ್ನು, ತನ್ನ ಅನುಭವ ಅಭಿಪ್ರಾಯಗಳನ್ನು ದಾಖಲಿಸುತ್ತಾ ಹೋಗುವ ಆಕೆ ತನ್ನ ಪ್ರಿಯಕರನಿಗೆ ಬರೆಯುವ ಪತ್ರಗಳು ಹಾಗೂ ತಿಂಗಳುಗಳನ್ನೇ ಶೀರ್ಷಿಕೆಯಾಗಿಸುತ್ತ ಒಂದು ಬಗೆಯ ಡೈರಿ ಎನ್ನುವಂತಹ ಅಂತರಂಗದ ಆಲಾಪಗಳ ಬರಹಗಳು ಸೇರಿ ಕಾದಂಬರಿಯಾಗಿದೆ. ಪ್ರೀತಿಯ ಉತ್ಕಟತೆಯನ್ನು ಬಿಚ್ಚಿ ಹೇಳುತ್ತಾ ಹೋಗುವ ಪರಿ ಅನನ್ಯ. ಬರವಣಿಗೆಯ ಶೈಲಿ ಹಾಗೂ ಅದನ್ನು ಅನುವಾದಿಸಿರುವ ರೀತಿ ಮನಮುಟ್ಟುತ್ತದೆ. ಇಲ್ಲಿ ನಾಯಕಿ ಯಾವುದೇ ಪ್ರಾಂತ್ಯಕ್ಕೆ ಸೀಮಿತವಾಗದ ಬರೀ ಭಾರತೀಯ ನಾರಿಯಾಗಿ ಹೊರಹೊಮ್ಮಿರುವುದು ಹಾಗೂ ಅನುವಾದಿತ ಕೃತಿ ಎಂದೆನಿಸದೆ ಸುಲಲಿತ ಸುಭಗವಾಗಿ ಸಾಗುವುದು ಕಾದಂಬರಿಯ ವೈಶಿಷ್ಟ್ಯ ಹಾಗೂ ಅದು ಗೆದ್ದಿರುವುದು ಇಲ್ಲೇ .

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books