‘ಮಯ್ಯಾದಾಸನ ವಾಡೆ’ದು. ನಿಂ. ಬೆಳಗಲಿ ಅವರ ಅನುವಾದಿತ ಐತಿಹಾಸಿಕ ಕಾದಂಬರಿಯಾಗಿದೆ. ಬ್ರಿಟಿಷರು ಭಾರತದಲ್ಲಿ ನೆಲೆಯೂರಲು ಮಾಡಿದ ಘಟನೆಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಹೊಸತು-2002-ಮಾರ್ಚ್
ಬ್ರಿಟಿಷರು ಭಾರತದಲ್ಲಿ ತಮ್ಮ ನೆಲೆಗಳನ್ನು ಭದ್ರಪಡಿಸುತ್ತಿದ್ದ ಕಾಲದ ಐತಿಹಾಸಿಕ ಕಾದಂಬರಿ, ಯುದ್ಧಗಳ ಖಾಡಾಖಾಡಿ ಇಲ್ಲದಿದ್ದರೂ ಕುಯುಕ್ತಿಯಿಂದ ಹೊಂಚು ಹಾಕಿ ಆಡಳಿತವನ್ನು ತನ್ನ ಮುಷ್ಟಿಯಲ್ಲಿ ತೆಗೆದುಕೊಳ್ಳುತ್ತಿದ್ದ ಕಾಲ. ತಮ್ಮ ಜೀವನ ಶೈಲಿ- ಸಂಪ್ರದಾಯಗಳನ್ನು ಬಿಟ್ಟುಕೊಡಲು ಸುತರಾಂ ಸಿದ್ಧವಿಲ್ಲದ ಅಂದಿನ ಜನ, ರಾಜ್ಯಗಳು ಕೈಬಿಟ್ಟುಹೋದರೂ ಸಾಂಕೇತಿಕವಾಗಿಯಾದರೂ ಸಾಂಕೇತಿಕವಾಗಿಯಾದರೂ ಅವುಗಳನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದ ರೀತಿ ಇಲ್ಲಿ ಚಿತ್ರಿತವಾಗಿದೆ. ಎಂದಿನಂತೆ ಹಳೆಯ ಮೌಲ್ಯಗಳು ಚಲಾವಣೆ ಗಿಲ್ಲದ ನಾಣ್ಯಗಳಂತೆ ಉಳಿದುಬಿಡುತ್ತವೆ. ಸೊಗಸಾದ ಅನುವಾದ ಬೆಳಗಲಿಯವರದ್ದು.
©2024 Book Brahma Private Limited.