ವಿಶ್ವ ಖ್ಯಾತಿಯ ನೈಜಿರಿಯಾ ದೇಶದ ಕಾದಂಬರಿಕಾರ ಚಿನುಅ ಅಚಿಬೆ ಅವರ Things Falling Apart ಎಂಬ ಕಾದಂಬರಿಯನ್ನು ಲೇಖಕ ಡಾ. ಸಿ. ನಾಗಣ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಭಂಗ' ಎಂದರೆ ಮಾತು ಅಥವಾ ಶಬ್ದ ಮುರಿಯುವಿಕೆ. ಯಾವುದನ್ನೇ ಆದರೂ ಮುರಿಯುವುದು, ತುಂಡು ಮಾಡುವುದು, ಕೊಂಕು, ಕಪಟ ಹೀಗೆ ನಾನಾ ಆರ್ಥಗಳನ್ನು ನೀಡುತ್ತದೆ. ಕಬ್ಬಿಣದ ಕುದುರೆಗಳನ್ನೇರಿ ಬಂದ ಪರಂಗಿ ಪಾದ್ರಿಗಳು ಹಾಗೂ ಸುವರ್ಣಗಡ್ಡೆಯ ಕೃಷಿಕರಾಗಿದ್ದ 'ಇಬೋ' ಬುಡಕಟ್ಟಿನವರು ಸಂಸ್ಕೃತಿಯನ್ನು ನಾಶಗೊಳಿಸುವುದು ಈ ಕಾದಂಬರಿಯ ಮೂಲ ವಸ್ತು. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...
READ MOREಭಂಗ’ ಕೃತಿಯ ಕುರಿತು ಲೇಖಕ ಸಿ ನಾಗಣ್ಣ ಅವರ ಮಾತುಗಳು.