ಈ ಕಾದಂಬರಿ ಬದುಕಿನ ಬಗ್ಗೆ, ದಾಂಪತ್ಯದ ಬಗ್ಗೆ, ಬೆಳಕುಚೆಲ್ಲುವಂತಹದ್ದು. ಮನುಷ್ಯನ ಬದುಕು ತೀರಾ ಸಂಕೀರ್ಣವಾದಷ್ಟು, ಅವನು ಪ್ರಕೃತಿದತ್ತ ಸುಖ, ರುಚಿಗಳಿಂದ ವಂಚಿತನಾಗಿ ಯಾಂತ್ರಿಕವಾದ ಅತೃಪ್ತ ಬದುಕಿಗೆ ಹೊಂದಿಕೊಳ್ಳುತ್ತಾನೆ. ಬಾಯಿ ಚಪ್ಪರಿಸಿ ಊಟ ಮಾಡುವ ದಿನಗಳು ಅವನ ಪಾಲಿಗಿಲ್ಲ. ಅಕ್ಕರೆಯ ತಾಯ್ತಂದೆ ಮಡದಿ ಮಕ್ಕಳ ನಡುವೆ ನಗುತ್ತಾ ಕಾಲ ಕಳೆಯುವುದುದೊಂದು ಕನಸಷ್ಟೆ.ಅತ್ತೆ ಮಾವಂದಿರ ನಡುವೆ ಬಾಳದೆ ಸಿಡಿದು ಬರುವ ಸೊಸೆ ಕರುಳ ಸಂಬಂಧಕ್ಕೆ ಮುಕ್ತಾಯವಾಡಿದರೆ, ಉದ್ಯೋಗಕ್ಕೋ ಸಮಾಜದ ಚಟುವಟಿಕೆಯ ಸಲುವಾಗಿ ಹೊರಗೆ ಉಳಿಯುವ ಹೆಣ್ಣು ಮಧುರ ದಾಂಪತ್ಯಕ್ಕೆ ತೆರೆ ಹಾಕಿ ಬಿಟ್ಟರೇ, ಬೋರ್ಡಿಂಗ್‍ನಲ್ಲಿ ಬೆಳೆಯುವ ಮಕ್ಕಳು! ಇಂಥದ್ದರ ನಡುವೆ ನಾವು ಕಳೆದುಕೊಳ್ಳುವುದು ಎಷ್ಟು?
©2024 Book Brahma Private Limited.