ರಾಷ್ಟ್ರಕವಿ ರವೀಂದ್ರನಾಥ ಠಾಕೂರ ಅವರ ಕಾದಂಬರಿ ‘The Wreck' ಅನ್ನು ಲೇಖಕಿ ಎಚ್.ವಿ. ಸಾವಿತ್ರಮ್ಮ ಅವರು ಅನುವಾದಿಸಿದ್ದೇ-ನೌಕಾಘಾತ. ಇದನ್ನು ತಮ್ಮ ಸ್ವತಂತ್ರ ಕೃತಿಯೋ ಎಂಬಂತೆ ಸೂಕ್ಷ್ಮವಾಗಿ ಮೂಲ ಕೃತಿಗೆ ಧಕ್ಕೆಯಾಗದಂತೆ ಅನುವಾದಿಸಿದ್ದಾರೆ. ಕೃತಿಗೆ ಮುನ್ನುಡಿ ಶಿವರಾಮ ಕಾರಂತರು ‘ಶಬ್ದಾಡಂಬರವಿಲ್ಲದೇ, ನೇರವಾಗಿ, ಸರಳವಾಗಿ ಕನ್ನಡಕ್ಕೆ ಅವರು ನೌಕಾಘಾತ ಕಾದಂಬರಿಯನ್ನು ಅನುವಾದಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಎಚ್.ವಿ. ಸಾವಿತ್ರಮ್ಮನವರು 1913ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನು ಹಾಗೂ ಎರಡು ಬಹುಮಾನಗಳನ್ನು ಪಡೆದ ಹೆಗ್ಗಳಿಕೆ ಇವರದು. ರವೀಂದ್ರನಾಥ ಠಾಕೂರರ ಕತೆಗಳನ್ನು ಚಿನ್ನದ ದೋಣಿ ಎಂದು, ಕಾದಂಬರಿಯನ್ನು ನೌಕಾಘಾತ ಎಂದು, ಭವಾನಿ ಭಟ್ಟಾಚಾರ್ಯರ ಕೃತಿಯನ್ನು ಹಸಿವೊ ಹಸಿವು ಎಂದು ಭಾಷಾಂತರಿಸಿದ್ದಾರೆ. ಅದರಂತೆ ಚೆಕಾಫ್ ನಾಟಕವನ್ನು ಮದುವಣಗಿತ್ತಿಎಂದು ಅನುವಾದಿಸಿದ್ದಾರೆ. ಅಲ್ಲದೆ ಮಹಾತ್ಮಾ ಗಾಂಧಿ: ಜಗತ್ತಿಗೆ ಅವರ ಸಂದೇಶ ಸಹ ಇವರ ಒಂದು ಅನುವಾದಗ್ರಂಥ. ಮರುಮದುವೆ, ನಿರಾಶ್ರಿತೆ, ಲಕ್ಷ್ಮೀ ಇವು ಇವರ ಕಥಾಸಂಕಲನಗಳು. ಬಿಸಿಲುಗುದರೆ ಒಂದು ನೀಳ್ಗತೆ. ಎಚ್.ವಿ.ನಂಜುಂಡಯ್ಯ (ಜೀವನ ಮತ್ತು ಕಾರ್ಯ) ಇವರು ...
READ MORE