ಟರ್ಕಿಯ ಲೇಖಕ ಒರ್ಹಾನ್ ಪಮುಕ್ ಅವರಿಗೆ ನೊಬೆಲ್ ಪ್ರಶಸ್ತಿ ತಂದು ಕೊಟ್ಟ ಕೃತಿ ಇದು. ಕನ್ನಡಕ್ಕೆ ಅನುವಾದಗೊಂಡಿರುವ ಒರ್ಹಾನ್ ಅವರ ಮೊದಲ ಕೃತಿ ಕೂಡ. ಟರ್ಕಿಯ ಈಶಾನ್ಯ ಭಾಗದ ಸಣ್ಣ ನಗರ ಕಾರ್ಸ್ ಕಾದಂಬರಿಯ ಕೇಂದ್ರ ಸ್ಥಳ.
1990ರ ದಶಕದಲ್ಲಿ ಟರ್ಕಿಯಲ್ಲಿ ಇಸ್ಲಾಂ ಮೂಲಭೂತವಾದಿಗಳು ಅಧಿಕಾರಕ್ಕೆ ಬರುವ ಆತಂಕ ಎದುರಾಗಿತ್ತು. ದೊಂದು ಐತಿಹಾಸಿಕ ಕಾಲಘಟ್ಟ. ಈ ವೇಳೆಯಲ್ಲಿ ನಾಗರಿಕರು ಮತ್ತು ಇಸ್ಲಾಂ ಮೂಲಭೂತವಾದಿಗಳ ನಡುವೆ ನಡೆಯುವ ಸಂಘರ್ಷ, ತಳಮಳಗಳನ್ನು ಲೇಖಕರು ಕಾದಂಬರಿಯಲ್ಲಿ ವಿವರಿಸಿದ್ದಾರೆ. ಭಯಾನಕ ಎನಿಸುವ ಅಸಹಿಷ್ಣುತೆ, ಜನಾಂಗೀಯ ದ್ವೇಷ, ಹಿಂಸೆ, ಕಗ್ಗೊಲೆಗಳ ಚಿತ್ರಣ ಮತ್ತು ಅವುಗಳ ನಿರರ್ಥಕತೆಯನ್ನು ಕಾದಂಬರಿ ಚಿತ್ರಿಸುತ್ತದೆ.
©2024 Book Brahma Private Limited.