2022ರ ʻಕುವೆಂಪು ರಾಷ್ಟ್ರೀಯ ಪ್ರಶಸ್ತಿʼ ಪುರಸ್ಕೃತ ಮೊದಲ ತಮಿಳಿನ ಲೇಖಕ ಇಮೈಯಮ್ ಅವರ ಕೃತಿಯ ಕನ್ನಡ ಅನುವಾದ ʻಭಾಗ್ಯಳ ತಂದೆʼ. ಕನಕರಾಜ್ ಆರನಕಟ್ಟೆ ಅವರು ಕನ್ನಡಕ್ಕೆ ತಂದ ಈ ಪುಸ್ತಕ ಅಪ್ಪ-ಮಗಳ, ಹೆಣ್ಣು ಮತ್ತು ಪರಂಪರಾಗತ ನಂಬಿಕೆಗಳ ನಡುವೆ ನಡೆಯುವ ನೀಳ್ಗತೆಯನ್ನು ಹೇಳುತ್ತದೆ. ಕೇರಿಯ ಹುಡುಗನನ್ನು ಪ್ರೀತಿಸಿದ ತಪ್ಪಿಗೆ ಮಗಳು ಭಾಗ್ಯಳನ್ನು ಕೊಲ್ಲಲು ಮುಂದಾಗುವ ಪಳನಿ ಅನ್ನುವ ತಂದೆ ಹಾಗೂ ಕುಟುಂಬದ ಹೃದಯ ವಿದ್ರಾವಕ ಕತೆ. ಪ್ರೇಮ ಪ್ರಕರಣದಿಂದ ಒಬ್ಬ ಹುಡುಗಿಯನ್ನು ಸಮಾಜ ನೋಡುವ ರೀತಿ, ಆಕೆಯ ಮೇಲೆ ಹೊರಿಸುವ ಆಪಾದನೆಗಳು ಎಲ್ಲವನ್ನೂ ಈ ಕತೆ ಬಹಿರಂಗವಾಗಿ ಸೂಕ್ಷ ದೃಷ್ಟಿಯಲ್ಲಿ ಹೇಳುತ್ತಾ ಹೋಗುತ್ತದೆ. ಮಗಳ ಪಾವಿತ್ರ್ಯದ ಬಗ್ಗೆ ಅನುಮಾನ ಬರುತ್ತಲೇ ಊರಿಗಾದ ಅವಮಾನ ಹಿಂದೆಪಡೆಯಲು ಆಕೆಯ ಸಾವು ಒಂದೇ ಪರಿಹಾರ ಅನ್ನುವ ಜನರ ಹುಚ್ಚು ಆಲೋಚನೆಗಳ ಆಳವನ್ನೂ ಕತೆಯುದ್ದಕ್ಕೂ ಲೇಖಕರು ತೋರಿಸುತ್ತಾರೆ. ಇದು ಇಂದಿಗೂ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಸಂಭವ ಕತೆಗಳೇ ಆಗಿದ್ದು, ಪ್ರಸ್ತುತ ಕೃತಿ ಮಾನವೀಯತೆಯ ಕ್ರೂರತೆಗೆ ಹಿಡಿದ ಕನ್ನಡಿಯಂತಿದೆ.
©2024 Book Brahma Private Limited.