‘ ರಾತ್ರಿ ಕಪ್ಪು ಕೊಡ ಕಪ್ಪು’ ಮೂಲದಲ್ಲಿ ಚಿಂತಾಮಣಿ ತ್ಯ್ರಂಬಕ ಖಾನೋಲ್ಕರ್ ಅವರ ಮರಾಠಿಯ ರೋಮ್ಯಾಂಟಿಕ್ ಕಾದಂಬರಿ. ಲೇಖಕ ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಆಪುರುಷ ಕಣ್ಣೆತ್ತಿ ಸರಿಯಾಗಿ ನೋಡುವುದೂ ಇಲ್ಲವೆಂದರೆ? ಭರ್ಜರಿ ದೇಹ, ಅಗಲವಾದ ಎದೆ. ಆಳವಾದ ಕಂಗಳು, ಶಾಂತಿಯುತ ಮುಖ, ಮೈಯೆಲ್ಲ ಮುಸುಗುಡುವ ಗೌರವವರ್ಣ, ಇಂಥವನು ಹೀಗೇಕೆ ಅಂತ? ಮನೆಯಲ್ಲೂ ಅವರಿಬ್ಬರೆ? ಹಿಂಬದಿಯಿಂದ ಮೆಲ್ಲಗೆ ಬಂದು ಸ್ಪರ್ಶಿಸಬಾರದೆ? ಹಸಿರು ಸೀರೆಯ ಅಂಚು ಹಿಡಿದು ಎಳೆಯಬಾರದೆ? ತನ್ನ ಮುಸುಗುಡುವ ದೇಹವನ್ನು, ಮೂಲೆಯ ಕತ್ತಲೆಯಲ್ಲಿ ನಿಂತ ಕಳ್ಳರಂತೆ ಗೂಬೆಯಂತೆ ನೋಡುತ್ತಾನಲ್ಲ; ಬದಲು ನೇರವಾಗಿ ಹಿಂಬದಿಯಿಂದ ಬಂದು ತನ್ನ ಬಲಿಷ್ಠ ತೋಳಿನಿಂದೇಕೆ ಕಣ್ಣು ಮುಚ್ಚಬಾರದು? ನಾನಂತೂ ಯಾವ ವಿರೋಧವನ್ನೂ ಮಾಡಲಾರೆ! ಇದೆಲ್ಲವೂ ನಿನ್ನದೇ. ಒರತಿಯ ನೀರು ಸಹ ಇದಕ್ಕೆ ಯಾವ ಆಘಾತ ಮಾಡಲಿಲ್ಲ! ಅಂಬೆ ನಿನಗಾಗೇ ಈ ದೇಹವನ್ನು ಸಂರಕ್ಷಿಸಿದ್ದಾಳೆ. ಬಾ ಪುರುಷನೆ ಕಣ್ತುಂಬ ಒಮ್ಮೆಯಾದರೂ ನೋಡು! ಲಕ್ಷ್ಮಿ ಪ್ರತಿಕ್ಷಣ ಒಂದೇ ಧ್ಯಾನದಲ್ಲಿ ಮುಳುಗಿಸುತ್ತಿದ್ದಳು. ಒಂದೇ ವಿಷಯವನ್ನು ಸತತ ಯೋಚಿಸುತ್ತಿದ್ದಳು’ ಎಂದು ಉಲ್ಲೇಖಿಸಲಾಗಿದೆ.
©2024 Book Brahma Private Limited.