ಆನಂದಮಠ ಕಾದಂಬರಿಯು ಬಂಕಿಮಚಂದ್ರ ಅವರ ಕಾದಂಬರಿಯ ಕನ್ನಡನುವಾದ. ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದವರು ಲೇಖಕ ಎಸ್. ಆರ್. ರಾಮಸ್ವಾಮಿ ಅವರು. ಈ ಕೃತಿಯಲ್ಲಿ ದೇಶಭಾಷೆಯ ಉಜ್ಜೀವನ ಹಾಗೂ ಸಂಸ್ಕಾರಪ್ರಧಾನ ಸಾಹಿತ್ಯರಚನೆಯ ಮೂಲಕ ನವಭಾರತನಿರ್ಮಾಣಕ್ಕೆ ಮಾರ್ಗವನ್ನು ಹದಗೊಳಿಸಿದ ಬಂಕಿಮಚಂದ್ರ ಚಟ್ಟೋಪಾಧ್ಯಾಯ (1838-1994)ರ ಕಾದಂಬರಿಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವುದು ‘ಆನಂದಮಠ. 1770ರ ದಶಕದಲ್ಲಿ ಬಂಗಾಲದಲ್ಲಿ ಭೀಕರ ಕ್ಷಾಮವಿದ್ದಾಗ ಆ ದುರ್ಭರ ಸ್ಥಿತಿಯಲ್ಲಿಯೂ ಮ್ಲೇಚ್ಛ ಸರ್ಕಾರ ನಡೆಸುತ್ತಿದ್ದ ಅವರ್ಣನೀಯ ಶೋಷಣೆಗೆ ಪ್ರತಿಭಟಿಸಿ ಪ್ರಭುತ್ವದ ವಿರುದ್ಧ ಸಂತಾನ ಸಂತಾಲ ಇರಬಹುದೆ? ಸಂನ್ಯಾಸಿಗಳು ಸಂಘಟಿಸಿದ ಸಮರವೇ ‘ಆನಂದಮಠ’ದ ಕಥಾವಸ್ತು. ‘ಆನಂದಮಠ’ ಕಾದಂಬರಿಗೆ ಅಭೂತಪೂರ್ವ ಪ್ರಸಿದ್ಧಿ ದೊರೆತದ್ದು ಅದರಲ್ಲಿ ಬಂಕಿಮಚಂದ್ರರು ಅಳವಡಿಸಿದ (ಅದಕ್ಕೆ ಹಿಂದೆಯೇ ತಾವು ರಚಿಸಿದ್ದ) ‘ವಂದೇ ಮಾತರಂ’ ಗೀತದಿಂದ. ರಾಷ್ಟ್ರವೇ ತಾಯಿ, ರಾಷ್ಟ್ರವೇ ದುರ್ಗಾಮಾತೆ ಎಂಬ ಭಾವನೆಗೆ ಕಾವ್ಯರೂಪ ನೀಡಿರುವ ‘ವಂದೇ ಮಾತರಂ’ ದಶಕಗಳುದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರ ರಣಘೋಷವಾಗಿ ಮೆರೆಯಿತು. ಚಿರಂತನ ಸ್ಫೂರ್ತಿಸ್ರೋತವಾಗಿ ಅದು ಜನಮಾನಸದಲ್ಲಿ ನೆಲೆನಿಂತಿದೆ. ಭಾರತೀಯ ಸಾಹಿತ್ಯದಲ್ಲಿ ಉನ್ನತ ಸ್ಥಾನ ಪಡೆದಿರುವ ‘ಆನಂದಮಠ’ ಕಾದಂಬರಿಯ ಹೊಸ ಅನುವಾದವನ್ನು ಈ ಪೀಳಿಗೆಯ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.
ನಾಡೋಜ ಎಸ್.ಆರ್.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...
READ MORE