ಮೈದಾನ

Author : ರಮೇಶ್ ಅರೋಲಿ

Pages 104

₹ 100.00




Year of Publication: 2019
Published by: ಅಹರ್ನಿಶಿ ಪ್ರಕಾಶನ
Address: ಜ್ಯೋತಿರಾವ್ ಬೀದಿ, 4ನೇ ತಿರುವು, ವಿದ್ಯಾನಗರ, ಶಿವಮೊಗ್ಗ
Phone: 9449174662

Synopsys

ತೆಲುಗು ಮೂಲದ ಗುಡಿಪಾಟಿ ವೆಂಕಟಾಚಲಂ ಅವರು ಬರೆದಿರುವ ಕಾದಂಬರಿಯನ್ನು ರಮೇಶ ಆರೋಲಿ ಅವರು ಕನ್ನಡೀಕರಿಸಿದ್ದಾರೆ. ಜಾತಿ ಜಾತಿಗಳ ನಡುವಿನ ಕಂದಕಗಳನ್ನು ಮುಚ್ಚಿ ಅವುಗಳ ಮೇಲೆ ಕಾಲಿರಿಸಿ ದಾಟುವುದು ಕಷ್ಟದ ಕೆಲಸವೇ ಸರಿ. ಆದರೆ ಹೆಣ್ಣು ತನ್ನ ಮನದ ಬಯಕೆಯನ್ನು ಅದುಮಿಟ್ಟುಕೊಂಡು ನರಳುವುದು ಎಷ್ಟು ಸರಿ. ತಪ್ಪು! ಹೆಣ್ಣಿನ ಮನಸ್ಸನ್ನು ಗಂಡನಾದವನು ಅರಿಯಬೇಕು. ಬದುಕಿನ ಜಂಜಾಟದಲ್ಲಿ ಹೆಣ್ಣನ್ನು ಕೇವಲ ವಂಶೋಧ್ದಾರಕಕ್ಕೆ ಮಕ್ಕಳನ್ನು ಹೆರುವ ಯಂತ್ರ ಹಾಗೂ ಮನೆಕೆಲಸಕ್ಕೆ ನೇಮಿಸಿದ ಆಳಿನಂತೆ ಕಂಡರೆ ಅವಳ ಮನದಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಕೊರಗುತ್ತಾರೆ. ಈ ವಿಷಯವನ್ನಿಟ್ಟುಕೊಂಡು ಸೂಕ್ಷ್ಮವಾಗಿ ಕಾದಂಬರಿಯನ್ನು ಹೆಣೆಯಲಾಗಿದೆ. ಇದು ಕೇವಲ ಕಾದಂಬರಿ ಎನಿಸದೇ ತನ್ನದೇ ಮನೆ ಅಥವಾ ನೆರೆಹೊರೆಯವರ ಕಥನವೆನಿಸಿದರೆ ತಪ್ಪಾಗಲಾರದು. 

About the Author

ರಮೇಶ್ ಅರೋಲಿ
(10 July 1982)

ಕವಿ ರಮೇಶ ಅರೋಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಎಳೆಯ ಪಾಪದ ಹೆಸರು ನಿಮ್ಮಂತೆ ಇಟ್ಟುಕೊಳ್ಳಿ (2010), ಜುಲುಮೆ (2014), ಒಳ ಮೀಸಲಾತಿ-ಮುಟ್ಟಲಾರದವನ ತಳಮಳ (ಸಹಸಂಪಾದನೆ) (2014), ಬಂಡಾಯದ ಬೋಳಬಂಡೆಪ್ಪ (ರಾಯಚೂರಿನ ದಲಿತ-ಬಂಡಾ ಚಳವಳಿಗಾರ ಬೋಳಬಂಡೆಪ್ಪನ ಬದುಕು-ಬರಹ), ತೀನ್‌ ಕಂದೀಲ್‌ (ನಾಟಕ) "ಬಿಡು ಸಾಕು ಈ ಕೇಡುಗಾಲಕ್ಕಿಷ್ಟು" (2021) (ಕವನ ಸಂಕಲನ) ಕೃತಿಗಳನ್ನು ರಚಿಸಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಡಾ. ಜಿ.ಎಸ್‌. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಬಿಡಿಗವಿತೆಗಳಿವೆ ಸಂಚಯ, ಸಂಕ್ರಮಣ, ಪ್ರಜಾವಾಣಿ ಕಾವ್ಯ ಸ್ಪರ್ಧೆಯಲ್ಲಿ ...

READ MORE

Related Books