ಲೇಖಕಿ ಸುಶೀಲಾ ಕೊಪ್ಪರ್ ಅವರು ಅನುವಾದ ಮಾಡಿದ ಕಾದಂಬರಿ ʼಅಶ್ರುʼ. ಜ್ಞಾನಪೀಠ ಪುರಸ್ಕೃತ ವಿ. ಸ. ಖಾಂಡೇಕರ್ ಅವರ ಕಾದಂಬರಿ. ಪುಸ್ತಕದ ಹಿನ್ನುಡಿ ಹೇಳುವಂತೆ, ಭಾರತೀಯ ಸಾಹಿತ್ಯದಲ್ಲಿ ಖಾಂಡೇಕರ್ ಹೆಸರು ಅತ್ಯಂತ ಮೆರುಗಿನದು. ಅವರ ಕೈಯಲ್ಲಿದ್ದುದು ಪೆನ್ನಲ್ಲ, ಕುಂಚ. ಅದರಿಂದ ರೂಪುಗೊಂಡುದು ಲೇಖನವಲ್ಲ ಕಲಾಕೃತಿ. ಅವರ ಬರವಣಿಗೆಯೇ ಹಾಗೆ ಓದುವುದಕ್ಕಿಂತ ಅನುಭವಿಸುವಂತಹದು. ಜೀವನ ನಿಷ್ಠೆ, ಪ್ರಾಮಾಣಿಕತೆ, ಪ್ರತ್ಯಕ್ಷಾನುಭೂತಿಗಳೇ ಇವರ ಬರಹದ ಸತ್ವ. ಇವರ ಅನೇಕ ಕೃತಿಗಳು ಈಗಾಗಲೇ ಕನ್ನಡಕ್ಕೆ ಅನುವಾದಗೊಂಡಿವೆ. ಉತ್ತಮ ಅಭಿರುಚಿಯ ಓದುಗನಿಗೆ ಅಶ್ರು ಒಂದು ರಸದೌತಣವಾಗಿದೆ.
ಸ್ತ್ರೀ ಸಮಾನತೆ, ಹಕ್ಕು ಬಾಧ್ಯತೆಗಳ ಬಗ್ಗೆ ಚಿಂತಿಸುತ್ತಿದ್ದ ಸುಶೀಲಾ ಕೊಪ್ಪರ್ ಅವರು ಬೆಳಗಾಂ ಜಿಲ್ಲೆಯ ಬೆಳಗಾಂ ತಾಲ್ಲೂಕಿನ ಹುದಲಿ ಗ್ರಾಮದಲ್ಲಿ 1924ರ ಮಾಚ್ 16 ರಂದು ಜನಿಸಿದರು. ‘ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ’ ಪುಸ್ತಕ ಬರೆದ ಮೊದಲ ಮಹಿಳೆ ಸುಶೀಲಾ ಕೊಪ್ಪರ. ತಂದೆ ಮಧ್ವರಾಯರು, ತಾಯಿ ಕಮಲಾಬಾಯಿ. ಅವರ ‘ಲೇಖಕನ ಹೆಂಡತಿ ಮತ್ತು ಇತರ ಕಥೆಗಳು’ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಶಸ್ತಿ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸುವ ಕನ್ನಡ ರತ್ನ ಪರೀಕ್ಷೆಗೆ ಪಠ್ಯವಾಗಿಯೂ ಈ ಕೃತಿ ಆಯ್ಕೆಯಾಗಿತ್ತು. ಕಥೆ ಬರೆಯುವುದರ ಜೊತೆಗೆ ಹಲವಾರು ಲೇಖನಗಳನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಮಹಿಳಾ ...
READ MORE