ಮೈಂಡ್ ಟ್ರೀ ಕಂಪನಿಯ ಸಹ ಸಂಸ್ಥಾಪಕ, ಲೇಖಕರೂ ಆದ ಸುಬ್ರಾತೊ ಬಾಗ್ಚಿ ಅವರ ’ಗೋ ಕಿಸ್ ದಿ ವಲ್ಡ್’ ಕೃತಿಯ ಕನ್ನಡ ಅನುವಾದವನ್ನು ವಂದನಾ ಪಿ.ಸಿ ಅವರು ’ ಜಗವ ಚುಂಬಿಸು’ ಎಂಬ ಶೀರ್ಷಿಕೆಯಡಿ ತಂದಿದ್ದಾರೆ.
ಲೇಖಕರ ಬಾಲ್ಯದಿಂದ ಹಿಡಿದು ವೃತ್ತಿ ಜೀವನದ ವಿವಿಧ ಆಯಾಮಗಳನ್ನು ನಿರೂಪಿಸುತ್ತಾ ಸಾಗುವ ಕೃತಿಯಿದು. ಹಲವು ಕುತೂಹಲಕಾರಿ ಮತ್ತು ಸಾಹಸಭರಿತ ಕತೆಗಳನ್ನು, ಅನುಭವ ಕಲಿಸಿದ ಪಾಠಗಳನ್ನು ಇಲ್ಲಿ ದಾಖಲಿಸಿದ್ದಾರೆ. ಇದನ್ನು ಸರಳವಾಗಿ ನಿರೂಪಿಸುತ್ತಾ ಸಾಗುತ್ತಾರೆ. ತಮ್ಮ ತಪ್ಪು ಒಪ್ಪುಗಳ ಪ್ರಾಮಾಣಿಕ ವಿಮರ್ಶೆಯನ್ನು ಮಾಡಿಕೊಂಡಿದ್ದಾರೆ. ಮತ್ತು ಬಹು ಸೂಕ್ಷ್ಮವಾಗಿ ಮನಸ್ಸು ಮತ್ತು ಬುದ್ದಗಳೆರಡನ್ನೂ ವಿಚಾರ ಮಾಡಬಹುದಾದ ಸಂಗತಿಗಳನ್ನು ಬಿತ್ತರಿಸಿದ್ದಾರೆ.
ಲೇಖಕಿ ವಂದನಾ ಪಿ.ಸಿ ಅವರು ಹುಟ್ಟಿದ್ದು ದಾವಣಗೆರೆ, ಬಾಲ್ಯ ಕಳೆದದ್ದು, ಬೆಳದದ್ದು ಮತ್ತು ವಿದ್ಯಾಭ್ಯಾಸ ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ. ದಾವಣಗೆರೆಯ ಬಿ.ಡಿ.ಟಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವಿ ಪಡೆದು, ಕೆಲಸಕ್ಕಾಗಿ ಬೆಂಗಳೂರಿಗೆ ಬಂದರು. ಐ.ಟಿ.ಐ ನಲ್ಲಿ ವೃತ್ತಿ ಆರಂಭಿಸಿದ ಅವರು ಸಾಫ್ಟ್ ವೇರ್ ಆಗಿ ಮುಂದುವರೆದರು. ಎಚ್.ಪಿ. (ಹ್ಯೂಲೆಟ್ ಪ್ಯಾಕರ್ಡ್)ನಲ್ಲಿ ಹತ್ತೊಂಭತ್ತು ವರ್ಷಗಳ ಕಾಲ ಕೆಲಸ ಮಾಡಿ. ಪ್ರೋಗ್ರಾಮ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ, 2012ರಲ್ಲಿ ಸ್ವಯಂ ನಿವೃತ್ತಿ ಪಡೆದರು.. ಕೆಲವು ಲೇಖನಗಳು ಈ ಮೊದಲು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸುಬ್ರೊತೊ ಬಾಗ್ಚಿ ಅವರ ಕೃತಿಯನ್ನು 'ಜಗವ ಚುಂಬಿಸು' ಎಂಬ ಶೀರ್ಷಿಕೆಯಡಿ ...
READ MORE