ಕರ್ನಾಟಕದ ರಾಜ್ಯಪಾಲರಾಗಿದ್ದ ಡಾ.ವಿ.ಎಸ್.ರಮಾದೇವಿಯವರು ತೆಲುಗಿನಲ್ಲಿ ಬರೆದ ‘ಅನುಬಂಧಾಲು’ ಕೃತಿಯ ಅನುವಾದವಾಗಿದೆ ಈ ಕಾದಂಬರಿ. ಮಾರ್ಕಂಡಪುರಂ ಶ್ರೀನಿವಾಸ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಒಂದು ಕಾಲಘಟ್ಟದಲ್ಲಿ ದೇಶದಲ್ಲಿ ನಡೆದ ರಾಜಕೀಯ, ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ ಹಾಗು ಶೈಕ್ಷಣಿಕ ಸಂಘಟನೆಗಳ ಆಗುಹೋಗುಗಳ ಚಿತ್ರಣವನ್ನು ಇಲ್ಲಿ ನೀಡಲಾಗಿದೆ. ತೆಲಂಗಾಣದ ರಜಾಕಾರರ ಕಾಲಘಟ್ಟದ ವಿವರ, ಆಗಿನ ಹಿಂದೂ ಮುಸ್ಲಿಂ ಕುಟುಂಬಗಳ ನಡುವೆ ಇದ್ದ ಸ್ನೇಹ-ಸಂಬಂಧಗಳು, ಕುಟುಂಬಗಳ ಜೀತ ಪದ್ಧತಿಗಳು, ದೇಶ-ಭಾಷೆ, ಸಂಸ್ಕೃತಿ ವಿಚಾರಗಳು, ಆಗಿನ ಜಮೀನ್ದಾರಿ ಕುಟುಂಬಗಳ ಪರಿಸ್ಥಿತಿ, ಕೌಟುಂಬಿಕ ಸ್ಥಿತಿಗತಿಗಳು, ಕಾರ್ಮಿಕರ ಸಮಸ್ಯೆ, ಸ್ತ್ರೀಯರ ಬದುಕಿನ ಬವಣೆಗಳು ಮುಂತಾದ ಪ್ರಮುಖ ವಿಷಯಗಳ ಕುರಿತು ಲೇಖಕರು ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
ಕವಿ ಮಾರ್ಕಂಡಪುರಂ ಶ್ರೀನಿವಾಸ ಅವರು 1948 ಡಿಸೆಂಬರ್ 10ರಂದು ಕೋಲಾರ ಜಿಲ್ಲೆ ಮಾರ್ಕಂಡಪುರಂದಲ್ಲಿ ಜನಿಸಿದರು. ತಾಯಿ ನಾರಾಯಣಮ್ಮ, ತಂದೆ ವೆಂಕಟರಮಣಪ್ಪ. ತೆಲುಗು-ಕನ್ನಡ ದ್ವಿಭಾಷಾ ಕವಿ. ವೃತ್ತಿಯಲ್ಲಿ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಸೃಜನಶೀಲ ಸಾಹಿತಿಯಾಗಿ ಹೆಸರಾದವರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ಇಣುಕುನೋಟ, ಆದಿ ಅಂತ್ಯಗಳ ನಡುವೆ, ಕತ್ತಲು ಬೆಳಕುಗಳಾಚೆ, ಬದುಕು ಚಿತ್ತಾರ, ನಮ್ಮನಮ್ಮಲ್ಲಿ ಮಾತ್ರ, ನಿಗೂಢ (ಕವನ ಸಂಕಲನಗಳು); ಹೊಸಮುಖ ತೊಟ್ಟುಕೊ, ವಿಶ್ವಂಭರ ಜ್ವಾಲೆಗಳು ಮತ್ತು ಮಹಾ ಸಮನ್ವಯ, ಮಹಾಪ್ರಸ್ಥಾನ, ಅಮೀನ (ಅನುವಾದಗಳು); ಜ್ಞಾನಪೀಠ ಪ್ರಶಸ್ತಿ ವಿಜೇತರು- ಸಿ. ನಾರಾಯಣರೆಡ್ಡಿ ಬದುಕು-ಬರಹ, ಮಹಾಕವಿ ...
READ MORE