’ನೀಲ ಕಿನ್ನರಿ ಮತ್ತು ಸೂತ್ರದ ಗೊಂಬೆ’ ಲೇಖಕಿ ರಜನಿ ನರಹಳ್ಳಿ ಅವರ ಅನುವಾದಿತ ಕೃತಿಯಾಗಿದೆ. ಇಟಲಿಯ ಕಾರ್ಲೋಕೊಲೌಡಿ ಕೃತಿಯ ಮೂಲ. ಪ್ರಾರಂಭವೇ ಅತ್ಯಂತ ಚೇತೋಹಾರಿಯಾಗಿದೆ. ಇಲ್ಲಿನ ವರ್ಣನೆಗಳು ಕಿನ್ನರಲೋಕದ ಸುಂದರ ಕಲ್ಪನೆಯನ್ನು ಮೂಡಿಸುತ್ತವೆ. ವ್ಯರ್ಥ ಮರದ ಕೊರಡು ಸೊಣ್ಣಪ್ಪನಾಗಿ ರೂಪುಗೊಳ್ಳುವುದೇ ವಿಶೇಷವೆನ್ನಿಸುತ್ತದೆ. ಬಡಗಿಯ ಜೀವನದ ಕುರಿತ ಅವಲೋಕನವೊಂದು ಇಲ್ಲಿದ್ದೂ, ಬಡಗಿಯ ಜೊತೆ ನಡೆಸುವ ಸಂವಹನ ಅಸಂಗತವೆನಿಸಿದರೂ, ಕಾದಂಬರಿಯ ಕಡೆ ಮುಖ ಮಾಡಿದಾಗ ಸಂಗತವ ಅನ್ನಿಸುತ್ತದೆ. ಸುಮಾರು ಮೂವತ್ತೆಂಟು ಅಧ್ಯಾಯಗಳಲ್ಲಿ ಮೈ ಹರಡಿಕೊಂಡಿರುವ ಕಾದಂಬರಿ ನಿರರ್ಗಳವಾಗಿ ಓದಿಸಿಕೊಂಡು ಹೋಗುತ್ತದೆ. ಮನುಷ್ಯನ ನಾಗರಿಕ ಜಗತ್ತಿನ ಕುರಿತು ಲೇಖಕ ಇಲ್ಲಿ ವಿಚಾರವನ್ನು ಮಾಡುತ್ತಾ, ಮನುಷ್ಯ ನಾಗರಿಕ ಜಗತ್ತಿಗೆ ಬಂದ ನಂತರವೇ ಪ್ರಾಣಿಯನ್ನು ಹೊರಗಿಟ್ಟಿರುವುದು ಎನ್ನುವಂತಹ ಅಭಿಪ್ರಾಯವನ್ನು ನೀಡುತ್ತಾರೆ. ಇಲ್ಲಿ ಲೇಖಕ ಹುಟ್ಟುಹಾಕಿರುವ ಸೋಮಾರಿ ಸೊಣ್ಣಪ್ಪ ಪಾತ್ರವು ಮಾನವನ ಜೊತೆ ಸಂಪರ್ಕ ಬರುವುದಕ್ಕಿಂತ ಮೊದಲಾಗಿ ಆತ ಜೀವವೈವಿಧ್ಯವನ್ನು ಮುಖಾಮುಖಿಯಾಗುವ ಬಗೆಯನ್ನು ವಿವರಿಸುತ್ತಾರೆ. ಹೀಗೆ ಲೇಖಕ ಎಲ್ಲಾ ಪಾತ್ರಗಳ ವರ್ಣನೆಯನ್ನು ಮಾಡುತ್ತಾ ಓದುಗರಿಗೆ ಸೌಮ್ಯವಾಗಿ ವಿಚಾರವನ್ನು ತಿಳಿಸುತ್ತಾರೆ.
https://epaper.vishwavani.news/bng/e/bng/12-03-2023/16
©2025 Book Brahma Private Limited.